ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಸಮಾಜ ಸುಧಾರಣೆಗಾಗಿ ರಾಷ್ಟ್ರೀಯ ಮೌಲ್ಯಗಳನ್ನು ನಡೆಸಿಕೊಳ್ಳುತ್ತಿರುವ ಶ್ರೀ ಸುಬ್ರಹ್ಮಣ್ಯಂ ಸ್ವಾಮಿ ರವರು ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಅವರು ಒಕ್ಕಲಿಗರೇ ಅಲ್ಲ ಎಂದು ತಳ್ಳಿ ಹಾಕಿರುತ್ತಾರೆ.
ಈ ವಿಚಾರವಾಗಿ ಎಚ್. ಡಿ. ಕುಮಾರಸ್ವಾಮಿ ಅವರು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಜಾತಿಯೇ ಬೇರೆ ಎಂದು ಹೇಳಿರುವ ವಿಷಯವಾಗಿ ತಮ್ಮ ತಂದೆಯವರಿಗೆ ಆಗಿರುವ ಅವಮಾನದ ಬಗ್ಗೆ ಸ್ವಾಭಿಮಾನದಿಂದ ಏಕೆ ಮಾನ ನಷ್ಟ ಮೊಕದ್ದಮೆ ಹಾಕಬಾರದು? ಎಂಬುದು ಒಂದು ಕಡೆಯ ಪ್ರಶ್ನೆ. ಆದರೆ, ಸದ್ಯ ಇಂತಹ ಒಂದು ಪ್ರಶ್ನೆಯು ಎಷ್ಟೇ ಮರೆತು ಹೋದರೂ ಬೂದಿ ಮುಚ್ಚಿದ ಕೆಂಡದಂತೆ ಒಕ್ಕಲಿಗ ಸಮುದಾಯದ ಅನೇಕರಲ್ಲಿ ಅಸಮಾಧಾನವನ್ನು ಉಂಟುಮಾಡುವಂತಹ ವಿಚಾರವಾಗಿದೆ.
ಮಣ್ಣಿನ ಮಗ ಒಕ್ಕಲಿಗರ ನಾಯಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರವರು ಒಕ್ಕಲಿಗರೋ ಅಲ್ಲವೋ ಎಂಬ ಗೊಂದಲಕ್ಕೆ ತೆರೆ ಯಾವಾಗ?
ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಸಮಾಜ ಸುಧಾರಣೆಗಾಗಿ ರಾಷ್ಟ್ರೀಯ ಮೌಲ್ಯಗಳನ್ನು ನಡೆಸಿಕೊಳ್ಳುತ್ತಿರುವ ಶ್ರೀ ಸುಬ್ರಹ್ಮಣ್ಯಂ ಸ್ವಾಮಿ ರವರು ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಅವರು ಒಕ್ಕಲಿಗರೇ ಅಲ್ಲ ಎಂದು ತಳ್ಳಿ ಹಾಕಿರುತ್ತಾರೆ.
ಸಮಾಜದಲ್ಲಿ ಹಲವಾರು ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳುವ ಹಾಗೂ ಸಮಾಜವನ್ನು ಎತ್ತಿ ಹಿಡಿಯುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬ ರಾಜಕೀಯ ಪಕ್ಷಗಳಲ್ಲಿ ತಮ್ಮನ್ನು ಒಕ್ಕಲಿಗ ನಾಯಕರು ಎಂದು ಗುರುತಿಸಿಕೊಂಡಿರುವ ಯಾವೊಬ್ಬ ನಾಯಕರು ಈ ವಿಚಾರವಾಗಿ ಸ್ಪಷ್ಟನೆಯನ್ನು ಸಮಾಜಕ್ಕೆ ಮತ್ತು ಸಮುದಾಯಕ್ಕೆ ಏಕೆ ನೀಡುತ್ತಿಲ್ಲ ಹಾಗೂ ಇದರಿಂದ ಅಂತಹ ಒಂದು ಮರ್ಮ ಏನಿದೆ?
ಮತ್ತೊಂದು ವೈಚಾರಿಕತೆಯಲ್ಲಿ ಹೇಳುವುದಾದರೆ, ಒಕ್ಕಲಿಗರು ಜಾತಿವಾದಿಗಳಲ್ಲ. ಒಂದು ವೇಳೆ ಕುಮಾರಸ್ವಾಮಿ ಅವರು ಮತ್ತು ಅವರ ತಂದೆ ಎಚ್. ಡಿ. ದೇವೇಗೌಡರವರು ಒಕ್ಕಲಿಗರ ಅಲ್ಲದ ಬೇರೆ ಯಾವುದೇ ಜಾತಿಯಾದರೂ ಅದನ್ನು ಬದಿಗಿಟ್ಟು, ನಾಯಕತ್ವ ಎಂದು ಬಂದಾಗ, ಒಳ್ಳೆಯ ನಾಯಕರು ಎಂದು ಚುನಾಯಿಸುವ ದೊಡ್ಡತನ ಖಂಡಿತವಾಗಿಯೂ ಒಕ್ಕಲಿಗ ಸಮುದಾಯಕ್ಕೆ ಇದೆ ಎಂಬುದು ಎಲ್ಲಾ ಗೌಡರಿಗೂ ಗೊತ್ತು. ಆದರೆ, ನಮ್ಮ ದೇಶದ ಮಾಜಿ ಪ್ರಧಾನಿಗಳಾಗಿರುವ ಒಬ್ಬ ಹಿರಿಯ ವ್ಯಕ್ತಿಯನ್ನು ದೆಹಲಿಯ ರಾಜಧಾನಿಯಿಂದ ಮತ್ತೊಬ್ಬ ಗೌರವಾನ್ವಿತ ಸಮಾಜಮುಖಿ ಹಾಗೂ ಸಾಮಾಜಿಕ ನ್ಯಾಯಯುತ ಕ್ರಿಯಾಶೀಲತೆ ಉಳ್ಳ ರಾಷ್ಟ್ರೀಯ ಮೌಲ್ಯವುಳ್ಳ ಹಿರಿಯ ವ್ಯಕ್ತಿ ಒಬ್ಬರು ಇಂತಹ ಸೂಕ್ಷ್ಮ ವಿಚಾರವನ್ನು ಹೇಳಿದಾಗ ಖಂಡಿತವಾಗಿಯೂ ಎಲ್ಲರಿಗೂ ಅನುಮಾನ ಮೂಡುವುದರ ಜೊತೆಗೆ ಇದೊಂದು ದ್ವಂದ್ವ ವಾತಾವರಣವನ್ನು ಸೃಷ್ಟಿಸುತ್ತದೆ.
ಸಾಮಾನ್ಯ ಜನರಿಗೆ ಈ ವಿಷಯ ಸಾಮಾನ್ಯವಾಗಿ ಕಂಡರೂ, ಪ್ರಸಕ್ತ ಇದೊಂದು ಒಕ್ಕಲಿಗ ಸಮುದಾಯಕ್ಕೆ ಹೇಳಿಕೊಳ್ಳಲಾಗದ ಪ್ರಶ್ನೆ ಎಂದೇ ಹೇಳಬಹುದು. ಏಕೆಂದರೆ ಬ್ರಿಟಿಷರ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬರು ಹೇಳಿರುವಂತೆ ಹಾಗೂ ಅವರ ಹೇಳಿಕೆ ಪ್ರಸಕ್ತ ಮೈಸೂರಿನಲ್ಲಿ ರೆಕಾರ್ಡ್ ಆಗಿರುವುದು ತಿಳಿದಿರುವಂತೆ, “ಒಕ್ಕಲಿಗರು ಅಷ್ಟು ದಡ್ಡರೇ?” ಎಂಬ ಚರ್ಚೆ ಹೊರವಲಯಗಳಲ್ಲಿ ಹರಿದಾಡುವುದು ಸಂಶಯವೇ ಇಲ್ಲ ಎಂಬುದರ ಸತ್ಯಾಸತ್ಯತೆ. ಪ್ರಸಕ್ತ ಎಚ್. ಡಿ. ದೇವೇಗೌಡರು ಒಕ್ಕಲಿರೋ ಅಲ್ಲವೋ ಎಂಬ ಸಮಾನ್ಯ ಪ್ರಶ್ನೆಯಿಂದ ಉದ್ಭವಿಸುತ್ತದೆ.
ಇನ್ನು ಮಠಾಧೀಶರಾಗಲಿ, ರಾಜಕೀಯ ನಾಯಕರಾಗಲಿ ಇಂತಹ ವಿಚಾರಗಳು ಬಂದಾಗ ಒಕ್ಕಲಿಗ ಸಮುದಾಯಕ್ಕೆ ಸಮಗ್ರ ಮಾಹಿತಿಯನ್ನು ಕೊಟ್ಟು ಅವರ ಗೊಂದಲಗಳಿಗೆ ತೆರೆ ಹಾಕುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕು.
ಹಾಗೂ ಇದೇ ವಿಚಾರವಾಗಿ ಅತಿ ದೊಡ್ಡ ಒಕ್ಕಲಿಗ ಸಂಸ್ಥಾನದ ಧ್ವನಿಯಾಗಿರುವ ಡಾಕ್ಟರ್ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರವರು ಏನು ಹೇಳುತ್ತಾರೆ ಎಂಬುದು ಖಂಡಿತವಾಗಿಯೂ ಅಪೇಕ್ಷಿಸಲು ಪಡುವ ವಿಷಯವಾಗಿದೆ. ಎಲ್ಲ ವಿಷಯಗಳ ಪೂರ್ಣತೆ ತಿಳಿದುಕೊಳ್ಳುವವರೆಗೂ ರಾಜಕೀಯ ಕ್ಷೇತ್ರದ ಯಾವುದೇ ಒಂದು ವಿಚಾರಕ್ಕೆ ಪ್ರಸಕ್ತ ರಾಜಕೀಯ ನಾಯಕರು ಎಂದು ಒಕ್ಕಲಿಗ ಸಮುದಾಯದಿಂದ ಹೇಳಿಕೊಳ್ಳುವ ನಾಯಕರನ್ನು ಹೇಗೆ ನಂಬಬೇಕು ಎಂದು ಒಕ್ಕಲಿಗ ಸಮುದಾಯ ಯೋಚನೆ ಮಾಡುವಂತಹ ಪರಿಸ್ಥಿತಿ ಒದಗಿದೆ.
Leave a Reply