ತಾಲೂಕಿನ ಸ್ವಾಭಿಮಾನಿ ನಾಗರೀಕರೇ ಎಚ್ಚರಿಕೆ!
ಇಷ್ಟು ದಿನ ಮುಳಬಾಗಿಲು ತಾಲೂಕಿನಲ್ಲಿ, ಕೆಲವು ನಾಯಕರು ಹಿಗ್ಗಿಲ್ಲದೆ, ನಾಯಕತ್ವದ ಲಕ್ಷಣಗಳ ಅರಿವೇ ಇಲ್ಲದಂತಹ ಹಣವಂತ ಮತ್ತು ಗುಣಹೀನ ಅನೇಕರನ್ನು ರಾಜಕೀಯ ವ್ಯವಸ್ಥೆಯಲ್ಲಿ ಹಣ ಹೆಂಡಕೊಟ್ಟು ಬ್ಯಾನರ್ ಗಳನ್ನು ಹಾಕಿಸಿ ಪ್ರಸಕ್ತ ಯುವಕರನ್ನು ತಪ್ಪು ದಾರಿಗೆ ನೂಕುವಂತಹ ಕೆಲಸಗಳನ್ನೇ ಮಾಡುತ್ತಾ ಬಂದಿರುತ್ತಾರೆ.
ಹಳ್ಳಿಗಳಲ್ಲಿ ಸಾಮರಸ್ಯ ಮತ್ತು ಐಕ್ಯತೆಗಾಗಿ ದೇವಸ್ಥಾನಗಳನ್ನು ತಮ್ಮ ಶ್ರಮದ ಹಣದಿಂದ ಕಟ್ಟುತ್ತಿದ್ದರು ಹಾಗೂ ಪೂಜಾ ಕೈಂಕಾರಿಯಾಗಳಲ್ಲಿ ಎಲ್ಲರೂ ತಮ್ಮ ಶ್ರಮದ ದುಡಿಮೆಯ ಬಲವನ್ನು ದೇವರಿಗೆ ಅರ್ಪಿಸುತ್ತಿದ್ದರು, . ಇಂತಹ ವ್ಯವಸ್ಥೆಯನ್ನು, ನಮ್ಮ ತಾಲೂಕಿಗೆ ರಾಜಕೀಯ ಮಾಡಲು ಬಂದ ಕೆಲವರು, ಕಪ್ಪು ಹಣವನ್ನು ಹಂಚಿ ಸಾಂಪ್ರದಾಯಿಕ ಹಿನ್ನೆಲೆಯನ್ನು ಹಾಳು ಮಾಡಿ ಹಳ್ಳಿಗೆ 10 ದೇವಸ್ಥಾನಗಳನ್ನು ಕಟ್ಟುವಲ್ಲಿ ಯಶಸ್ವಿಯಾಗುವುದಲ್ಲದೆ ಅಲ್ಲಿನ ಜನರ ಐಕ್ಯತೆಯನ್ನು ತುಳಿದು ಹಾಕಿದರು. ಇಂತಹ ರಾಷ್ಟ್ರಧ್ರೋಹಿ ಕಪ್ಪು ಹಣ ಹಳ್ಳಿಗಳಲ್ಲಿ ಹರಿದಾಡಲು ಹಿಂದಿನಿಂದಲೂ ಶ್ರಮದಿಂದ ಬದುಕಿ ಊರಿಗೆ ದೊಡ್ಡವರು ಎಂದೆನಿಸಿಕೊಂಡಿದ್ದ ಊರಿನ ಹಿರಿಯ ಶ್ರಮಜೀವಿಗಳು, ಕಪ್ಪು ಹಣದ ಬಕೀಟ್ ಹಿಡಿದು ಮೈಗಳ್ಳರಾಗಿ ಹಣ ಹೆಂಡವನ್ನು ಉಚಿತವಾಗಿ ಹಂಚುವ ಹಾಗೂ ನಿಜವಾದ ಹಳ್ಳಿಯಲ್ಲಿನ ಸ್ವಾಭಿಮಾನಿಗಳನ್ನು ಹಾಳು ಮಾಡಿ ಅಲ್ಲಿನ ಬಡತನದಲ್ಲಿರುವ ಹಾಗೂ ಅನೇಕ ಜನರ ಅವಶ್ಯಕತೆಗಳನ್ನು ತಿಳಿದುಕೊಂಡು ಅದರ ದುರುಪಯೋಗ ಮಾಡಿಕೊಂಡು ಹಳ್ಳಿಗಳನ್ನು ಈಗಾಗಲೇ ಹಾಳು ಮಾಡಿರುತ್ತಾರೆ. . ಇದಕ್ಕೆ ಪೂರಕವೆಂಬಂತೆ ನಮ್ಮ ಹಳ್ಳಿಯಲ್ಲಿನ ಮುಗ್ಧ ಜನ ವಿಧಿ ಇಲ್ಲದೆ ಗುಣವಿಲ್ಲದಿದ್ದರೂ ಹಣವಿರುವ ನಾಯಿ ನರಿಗಳನ್ನು ನಾಯಕರೆಂದು ಒಪ್ಪಿಕೊಂಡಿರುವ ಅನೇಕ ನಿದರ್ಶನಗಳು ಮುಳಬಾಗಿಲು ತಾಲೂಕಿನಲ್ಲಿ ನಾವು ಕಾಣಬಹುದು. ಇನ್ನಾದರೂ ತಾಲೂಕಿನ ಜನತೆ ಸ್ವಾಭಿಮಾನವನ್ನು ಬೆಳೆಸಿಕೊಂಡು ಹಳ್ಳಿಯನ್ನು ಕಟ್ಟಿದ ಹಿರಿಯರನ್ನು ನೆನೆಸಿಕೊಂಡು ಹಿಂದಿನ ಸಾಮರಸ್ಯಗಾಗಿ ಪಣತೊಟ್ಟು ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸ್ವಚ್ಛ ರಾಜಕೀಯವನ್ನು ಮೈಗೂಡಿಸಿಕೊಂಡು ಹೊಲಸು ರಾಜಕೀಯವನ್ನು ಊರಿನಾಚೆ ತೊಲಗಿಸಿ ಮುಂದಿನ ಯುವ ಪೀಳಿಗೆಗೆ ಏನು ಮಾಡಬೇಕು ಎಂದು ಇನ್ನಾದರೂ ಪಣತೊಡಬೇಕು.
ಒಮ್ಮೆ ಯೋಚಿಸಿ ಮುಳಬಾಗಿಲು ತಾಲೂಕಿನಲ್ಲಿ ಎಷ್ಟೆಲ್ಲಾ ಸಮಸ್ಯೆಗಳು ಇದೆ, ಕಂದಾಯ ಇಲಾಖೆಯ ಕಾರ್ಯಾಂಗ ವ್ಯವಸ್ಥೆಯ ಅನೇಕ ಅಧಿಕಾರಿಗಳು ಭ್ರಷ್ಟಾಚಾರದಿಂದ ನಾಚಿಕೆ ಇಲ್ಲದೆ ಭೂಗಳ್ಳತನ ಮಾಡುತ್ತಿರುವುದು ಹಾಗೂ ಭೂಗಳ್ಳರಿಗೆ ಪೂರಕ ವ್ಯವಸ್ಥೆಯನ್ನು ಸೃಷ್ಟಿ ಮಾಡಿಕೊಡುತ್ತಿರುವುದು ಒಂದು ಕಡೆಯಾದರೆ, ಜಿಲ್ಲಾ ಕಾರ್ಯಾಂಗ ವ್ಯವಸ್ಥೆ ಹವಾಮಾನ ಬಿಕಟ್ಟಿನ ವಿಷಯ ತಿಳಿದಿದ್ದರೂ ಸಹ ಭ್ರಷ್ಟಾಚಾರದಿಂದ ಅನೇಕ ರಸ್ತೆ ಬದಿಗಳಲ್ಲಿ ಮತ್ತು ಭೂಗಳ್ಳರ ಹೊಲಸು ತಿನ್ನುತ್ತಾ ಪ್ರಕೃತಿಯನ್ನು ಹಾಳು ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಇಂತಹ ಎಲ್ಲ ಸಮಸ್ಯೆಗಳು ಇಂದಲ್ಲ ಒಂದು ದಿನ ನಿಮ್ಮ ಮಕ್ಕಳ ಭವಿಷ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ನಿಮಗೆ ಎಚ್ಚರಿಕೆ ಇರಲೇಬೇಕು.
ಇನ್ನು ನಗರದ ಬೀದಿಗಳಲ್ಲಿ ನೋಡಿದರೆ ಹಣ ಇರುವವರಿಗೆ ಒಂದು ಅಳತೆ, ಸಾಮಾನ್ಯ ಜನರಿಗೆ ಇನ್ನೊಂದು ಅಳತೆ, ಇಷ್ಟ ಬಂದಂತೆ ಅಗಲೀಕರಣ ಮಾಡಿ ಡಾಂಬರ್ ಹಾಕಿರುವ ನಾಡದ್ರೋಹಿಗಳು ಇದ್ದಾರೆ… ಇಂತಹ ಎಲ್ಲ ವಿಚಾರಗಳನ್ನು ಮಾತನಾಡುವ ಮತ್ತು ತಮ್ಮ ತಮ್ಮ ವಾರ್ಡ್ಗಳಲ್ಲಿ ಎಷ್ಟು ಹಣ ಬರುತ್ತಿದೆ ಮತ್ತು ಎಷ್ಟು ಕಾಮಗಾರಿ ನಡೆಯುತ್ತಿದೆ ಎಂದು ವಿಚಾರಣೆ ಮಾಡುವ ನೈತಿಕ ನಾಗರಿಕರು ಕಡಿಮೆ ಸಂಖ್ಯೆಯಲ್ಲಿ ಇರುವುದು ಬಹಳ ಶೋಚನೀಯ ಸಂಗತಿ.
ಇನ್ನು ತಾಲೂಕಿನ ಹೆಚ್ಚಿನ ಸಂಖ್ಯೆಯ ಯುವಕರಿಗೆ ಭಗತ್ ಸಿಂಗ್ ವಿವೇಕಾನಂದರು ಹಾಗೂ ಇನ್ನೂ ಅನೇಕ ಮಹನೀಯರು ಪ್ರೇರಣೆ ಆದರೂ ಸಹ ಅವರ ಆದರ್ಶಗಳನ್ನು ಪಾಲಿಸುವಲ್ಲಿ ಇನ್ನಷ್ಟು ಕಣ್ಣಿಗೆ ಕಾಣುವಂತಹ ಅವಕಾಶಗಳೇ ಇಲ್ಲ, ಒಂದು ತಪ್ಪು ನೀಡಿದರೆ ಅದನ್ನು ಪ್ರಶ್ನಿಸುವ ಧೈರ್ಯವೇ ಕಳೆದುಕೊಂಡಿರುವ ಮುಳಬಾಗಿಲಿನ ಪ್ರಜೆಗಳಿಗೆ ಧೈರ್ಯ ತುಂಬುವವರು ಯಾರು?
ಇನ್ನು ಹೆಚ್ಚಿನ ರೀತಿಯಲ್ಲಿ ಪ್ರಶ್ನೆ ಮಾಡಲು ಹೋದರೆ ಜಾತಿ ಅಥವಾ ಧರ್ಮ ಎಂಬ ಪೈಂಟ್ ಹಾಕಿಕೊಂಡು ನಡೆದಾಡುವ ದರಿದ್ರ ಜನರು ಇಲ್ಲಿ ಇದ್ದಾರೆ ಎಂಬ ವದಂತಿಯು ಇದೆ… ಇನ್ನು ರೈತರ ಸಂಕಷ್ಟ ಕೇಳುವಂತೆ ಇಲ್ಲ, ಅತಿ ಹೆಚ್ಚು ಕಳಪೆ ಗುಣಮಟ್ಟದ ಗೊಬ್ಬರಗಳನ್ನು ಹಾಗೂ ಕೃಷಿ ಅವಶ್ಯಕತೆಗಳನ್ನು ನೀಡುವ ಮಹಾದಾನಿಗಳು ಹೆಚ್ಚಿನ ಮಂದಿ ಇಲ್ಲೇ ಇದ್ದಾರೆ. ಈ ಮೇಲಿನ ಎಲ್ಲ ವಿಷಯಗಳು ಸತ್ಯ ಆದರೆ ತಿದ್ದಿಕೊಳ್ಳೋಣ ಅಥವಾ ಸುಳ್ಳಾದರೆ ಮರೆತು ಬಿಡೋಣ ಹಾಗೂ ಈ ವಿಚಾರವಾಗಿ ಎಚ್ಚೆತ್ತುಕೊಳ್ಳುವುದಾದರೆ ಇದನ್ನು ಹೆಚ್ಚು ಮಂದಿಗೆ ಹಂಚಿಕೊಳ್ಳೋಣ ಅಂದರೆ ಶೇರ್ ಮಾಡೋಣ.
ಇಂತಹ ಮೇಲ್ಕಂಡ ಎಲ್ಲ ವಿಷಯಗಳ ವಿಮರ್ಶೆಯ ನಂತರ ಒಂದನ್ನು ಎಲ್ಲರೂ ತಿಳಿದುಕೊಳ್ಳಬೇಕು, ಹಿಂದಿನ ರಾಜಕಾರಣಿಗಳಂತೆ ಸದ್ಯ ನಮ್ಮ ಈಗಿನ ಶಾಸಕರು ಹಣ ಹೆಂಡ ಹಂಚುತ್ತಿಲ್ಲ ಹಾಗೂ ಬ್ಯಾನರ್ ಗಳನ್ನು ಹಾಕುತ್ತಿಲ್ಲ ಮತ್ತು ಎಲ್ಲಿಂದರಲ್ಲಿ ದುಂದು ವೆಚ್ಚ ಮಾಡಿ ಸಮಾಜವನ್ನು ಹಾಳು ಮಾಡುತ್ತಿಲ್ಲ… ಇಷ್ಟು ಮಾತ್ರ ಇದ್ದರೆ ಕನಿಷ್ಠ ನಮ್ಮ ಮುಂದಿನ ಪೀಳಿಗೆಗೆ ಸ್ವಾಭಿಮಾನ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಕಲಿತುಕೊಳ್ಳುವ ಅವಕಾಶ ದೊರಕುತ್ತದೆ.
ಇನ್ನು ಪ್ರಸಕ್ತ ಶಾಸಕರು ಏನು ಮಾಡುತ್ತಾರೆ ಎಂದು ನಾವು ನೀವೆಲ್ಲ ಮನೆಯಲ್ಲೇ ಕುಳಿತುಕೊಂಡು ಯೂಟ್ಯೂಬ್ ಚಾನೆಲ್ ಗಳನ್ನು ಮತ್ತು ಪೇಪರ್ ಗಳನ್ನು ಓದುತ್ತಾ ತಿಳಿದುಕೊಳ್ಳುತ್ತಾ ಹೊರಟರೆ, ಇನ್ನು ಎರಡು ಬಾರಿ ಸಮೃದ್ಧಿ ವಿ ಮಂಜುನಾಥ್ ರವರು ಶಾಸಕರಾಗಿ ಬಂದರೂ ಸಹ ಇದೇ ಪರಿಸ್ಥಿತಿ ಇರುತ್ತದೆ ಎಂಬುದನ್ನು ಮರೆಯದಿರಿ, ಬದಲಿಗೆ ನಾವು ಶಾಸಕರೊಂದಿಗೆ ಮಾತನಾಡಲು ನಮ್ಮ ಸಮಾಜದ ಅವಶ್ಯಕತೆ ಇರುವ ಸಮಸ್ಯೆಗಳನ್ನು ಜಾತಿ ಧರ್ಮ ಮತ್ತು ಹಣಗಾಹಿ ರಾಷ್ಟ್ರಧ್ರೋಹಿಗಳ ವ್ಯಾಪ್ತಿಯೊಡನೆ ಇರುವ ಬದಲು ನೇರವಾಗಿ ಶಾಸಕರನ್ನು ಮಾತನಾಡುವಂತಹ ವ್ಯವಸ್ಥೆಯನ್ನು ಸೃಷ್ಟಿಸಲು ನಮ್ಮ ನಾಗರೀಕರ ವೇದಿಕೆಯ ಅಥವಾ ನಿಮ್ಮ ವಾರ್ಡ್ಗಳ ಅಥವಾ ಹಳ್ಳಿಗಳ ಮೆಂಬರ್ ಗಳ ಜೊತೆಗೂಡಿ ಸಮಾಲೋಚಿಸಬೇಕು, ಇನ್ನೂ ಚಿಕ್ಕದಾಗಿ ಹೇಳುವುದಾದರೆ ಮೊದಲು ನೀವೆಲ್ಲ ಸಂವಿಧಾನದಲ್ಲಿ ಪಾಲ್ಗೊಳ್ಳಬೇಕು ನಿಮ್ಮ ಜವಾಬ್ದಾರಿಯನ್ನು ಅರಿಯಬೇಕು. ನಮ್ಮ ಶಾಸಕರನ್ನು ನಾವೇ ಪ್ರಶ್ನಿಸಿ ಪ್ರಸಕ್ತ ಇರುವ ಭ್ರಷ್ಟಾಚಾರ ಮತ್ತು ಇತರೆ ಮೂಲಭೂತ ಸೌಕರ್ಯಗಳ ವಿಚಾರವಾಗಿ ಅವರ ಗಮನಕ್ಕೆ ನೇರವಾಗಿ ವಿಷಯಗಳನ್ನು ಪತ್ರ ಮುಖೇನ ತರಬೇಕು ಹಾಗೂ ಶಾಸಕರು ನಮ್ಮ ಜನಪ್ರತಿನಿಧಿ ಎಂಬುದನ್ನು ಮರೆಯಬಾರದು.
ಇನ್ನು ಮುಂದಕ್ಕೆ ಹಣ ಮತ್ತು ದೌರ್ಜನ್ಯದ ಬಲದಿಂದ ನಾಯಕರಾಗಿದ್ದ ಅನೇಕರನ್ನು ನಿವೃತ್ತಿ ಕೊಡುವ ಚರ್ಚೆಗಳನ್ನು ನಡೆಸಬೇಕು, ರಾಷ್ಟ್ರೀಯ ಮೌಲ್ಯಗಳು ಮತ್ತು ಜನತೆಯೊಂದಿಗೆ ಸದಾ ಕಾಲ ಕೈಗೆಟುಕುವಂತಹ ಸೃಜನತೆ ಮತ್ತು ಸರಳತೆ ಇರುವಂತಹ ವ್ಯಕ್ತಿತ್ವಗಳನ್ನು ರಾಜಕೀಯ ನಾಯಕರುಗಳಾಗಿ ಹಳ್ಳಿಗಳಲ್ಲಿ ಮತ್ತು ನಗರದ ವಾರ್ಡ್ಗಳಲ್ಲಿ ನಾವೇ ಮುಂದೆ ತರಬೇಕು, ಇನ್ನು ಹಣ ಬಲದಿಂದಲೇ ಚುನಾವಣೆಗಳನ್ನು ಎದುರಿಸುತ್ತೇವೆ ಎಂಬ ಅಹಂಕಾರ ಇರುವ ಮುಟ್ಟಾಳರನ್ನು ಸೊಳ್ಳೆಗಳಂತೆ ಹೊಸಕಿ ಹಾಕುವ ವಿಚಾರವೆಂದರೆ, ನಾವೇ ಸೂಚಿಸುವ ನಾಯಕರನ್ನು, ನಾವೇ ಒಬ್ಬರಿಗೆ ಇಷ್ಟು ಎಂಬಂತೆ ಹಣವನ್ನು ಕೇಂದ್ರೀಕರಿಸಿ ಗೆಲ್ಲಿಸಿಕೊಂಡರೆ ಖಂಡಿತವಾಗಿಯೂ ಅವನು ನಮ್ಮ ಮಕ್ಕಳ ಭವಿಷ್ಯಕ್ಕೆ ಸೇವಕನಾಗಿಯು ಇರುತ್ತಾನೆ ಎಂಬುದನ್ನು ಪ್ರತಿಯೊಬ್ಬರು ಮರೆಯಬಾರದು.
ಪ್ರಸಕ್ತ ನಮ್ಮ ನಗರ ಅಭಿವೃದ್ಧಿಯಾಗಬೇಕಾದರೆ ಸಂವಿಧಾನದ ಪಾರದರ್ಶಕ ಆಡಳಿತ ವ್ಯವಸ್ಥೆ ನಾವೇ ತರಬೇಕು ಹಾಗೂ ಇನ್ನು ಮುಂದೆ ನಾವೆಲ್ಲರೂ ಶಾಸಕರನ್ನು ನಮ್ಮ ಪ್ರತಿನಿಧಿ ಎಂದು ಬೆಂಬಲಿಸಿ ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸಬೇಕು, ಅದನ್ನು ಬಿಟ್ಟು ನಮ್ಮ ಶಾಸಕರನ್ನು ಭೇಟಿ ಮಾಡಲು ಹರಿಯುವ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಎಂಬಂತಹ ವಾತಾವರಣವನ್ನು ಸೃಷ್ಟಿ ಮಾಡಲು ಅವಕಾಶ ಕೊಡಬಾರದು…
. ಈ ಮೇಲ್ಕಂಡ ವಿಷಯಗಳು ಕಾಲ್ಪನಿಕವಲ್ಲ ಬದಲಿಗೆ ಕಠೋರ ಸತ್ಯ ಎಂಬುದು ನಮ್ಮ ಅನಿಸಿಕೆ, ಕನಿಷ್ಠ ಯಾರೇ ಆಗಲಿ ನಮ್ಮಿಂದ ಆಗದ ಕೆಲಸವನ್ನು ನಮ್ಮ ಮುಂದಿನ ಯುವಪೀಳಿಗೆಯ ಭವಿಷ್ಯದಲ್ಲಿ ಕಾಣುವುದು ಧರ್ಮ ಎಂಬುದನ್ನು ಎಂದಿಗೂ ಮರೆಯಬಾರದು.
Leave a Reply