ನಮ್ಮ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಶ್ರೀ ನರೇಂದ್ರ ಮೋದಿಜಿ ರವರು ಡಿಜಿಟಲ್ ಭಾರತವನ್ನು ಸಾಕಾರಗೊಳಿಸಲು ಬಹಳಷ್ಟು ಪ್ರಯತ್ನ ಮಾಡಿ, ಎಲ್ಲೆಡೆ ಅದು ಕಾರ್ಯರೂಪಕ್ಕೆ ಬಂದಿದೆ ಎಂದು ಹೇಳುತ್ತಿರುವುದು ಸರಿಯೇ?
ನನ್ನ ಅನಿಸಿಕೆಯಂತೆ ನಮ್ಮ ಪ್ರಧಾನ ಮಂತ್ರಿಗಳನ್ನು ಕಾರ್ಯಾಂಗದ ಉನ್ನತ ಮಟ್ಟದ ವ್ಯವಸ್ಥೆ ಮೋಸ ಮಾಡುತ್ತಿಲ್ಲವೇ? ಎಂಬ ಸಂಶಯ…
ಪ್ರಸಕ್ತ ಕೋಲಾರ ಜಿಲ್ಲಾ ಆಡಳಿತ ಕಚೇರಿ ಯಾವುದೇ ರೀತಿಯ ಜವಾಬ್ದಾರಿಯುತ ಆಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿ ಪರಿಪೂರ್ಣ ವಿಫಲ ಆಗಿದೆ ಎಂದು ಹೇಳಬಹುದು. ಇದಕ್ಕೆ ಪೂರಕವೆಂಬಂತೆ ಜಿಲ್ಲಾ ಆಡಳಿತ ವ್ಯವಸ್ಥೆಯಲ್ಲಿ ಶೇಕಡವಾರು 99% ಯಾವುದೇ ನಾಗರಿಕರು ಡಿಜಿಟಲ್ ಭಾರತ ಎಂದು ಹೇಳಿಕೊಳ್ಳುವಂತೆ ನಮ್ಮ ಮೋದಿಜಿಯವರ ಭರವಸೆಯಂತೆ ಇ-ಮೇಲ್, ಅಥವಾ ವಾಟ್ಸಪ್, ಅಥವಾ ನೇರ ಕರೆ, ಮಾಡಿದಾಗ ಯಾವುದೇ ರೀತಿಯ ಇಮೇಲ್ ವಾಟ್ಸಪ್ ಸಂಬಂಧಿತ ಆಧುನಿಕ ವ್ಯವಸ್ಥೆಯ ಕಂಪ್ಲೇಂಟ್ ಅರ್ಜಿ ಕೊಟ್ಟ ನಂತರ ಆನಿಟ್ಟಿನಲ್ಲಿ ಉತ್ತರ ಸಿಗುವುದು ಪರಿಪೂರ್ಣ ಶೂನ್ಯವಾಗಿದೆ.
ಜಿಲ್ಲಾಧಿಕಾರಿಗಳು ಮತ್ತು ಅವರ ಆಡಳಿತದಲ್ಲಿ ಇರುವ ಶೇಕಡವಾರು ಇಲಾಖೆಗಳಿಗೆ ಯಾವುದೇ ರೀತಿಯ ಮೇಲ್ಗಳನ್ನು ಕಳುಹಿಸಿದಾಗ ಅದಕ್ಕೆ ಉತ್ತರ ಬರುವುದು ಅಸಾಧ್ಯ ಎಂಬಂತ ಪರಿಸ್ಥಿತಿ ಇದೆ.
ಸಾರ್ವಜನಿಕರ ಹಿತದೃಷ್ಟಿಯಲ್ಲಿ ಈ ರೀತಿಯಾಗಿ ನಡೆದರೆ ಇದು ಕಾರ್ಯಾಂಗದ ವೈಫಲ್ಯವೋ ಅಥವಾ ಕೇಂದ್ರ ಸರ್ಕಾರದ ಸುಳ್ಳು ಆಶ್ವಾಸನೆಯೋ ಎಂಬುದು, ಅದರ ಪ್ರಯೋಜನದ ಮತ್ತು ನಾಗರಿಕರಿಗೆ ತಲುಪುವ ವ್ಯಾಪ್ತಿಯ ವಿಚಾರವಾಗಿ ಆಧಾರವಾಗಿರುತ್ತದೆ ಎಂಬುದನ್ನು ಗಮನಿಸಬೇಕು…
Leave a Reply