ಕೋಲಾರ ಜಿಲ್ಲೆ ಮುಳಬಾಗಿಲಿನ ಎಂ ಜಿ ರಸ್ತೆಯ ಪಾದಾಚಾರಿ ಮಾರ್ಗದಲ್ಲಿ ಮಾಜಿ ಶಾಸಕ ಆಲಂಗೂರು ಶ್ರೀನಿವಾಸ್ ಗೌಡರವರ ಪುತ್ತಳಿ ನಿರ್ಮಾಣ ಮಾಡುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಪ್ರಕರಣ ಸಂಬಂಧ ಮುಳಬಾಗಿಲು ತಾಲೂಕು ನಾಗರಿಕ ವೇದಿಕೆ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯ ಹಾಗೂ ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಮುಳಬಾಗಿಲು ತಾಲೂಕಿನ ಪ್ರಸಕ್ತ ಕಾರ್ಯಾಂಗ ವ್ಯವಸ್ಥೆ ಮತ್ತು ಪುತ್ತಳಿಗೆ ಸಂಬಂಧಪಟ್ಟ ವಿಮರ್ಶ…
ಕೋಲಾರ ಜಿಲ್ಲೆ ಮುಳಬಾಗಿಲಿನ ಎಂ ಜಿ ರಸ್ತೆಯ ಪಾದಾಚಾರಿ ಮಾರ್ಗದಲ್ಲಿ ಮಾಜಿ ಶಾಸಕ ಆಲಂಗೂರು ಶ್ರೀನಿವಾಸ್ ಗೌಡರವರ ಪುತ್ತಳಿ ನಿರ್ಮಾಣ ಮಾಡುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ಮುಳಬಾಗಿಲು ತಾಲೂಕು ನಾಗರಿಕ ವೇದಿಕೆ ಸಲ್ಲಿಸಿದ ಅರ್ಜಿಯನ್ನು
ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯ ಹಾಗೂ ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಮುಳಬಾಗಿಲಿನ ಎಂ ಜಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಸ್ಥಳೀಯ ಮಾಜಿ ಶಾಸಕರ ಪುತ್ತಳಿ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಇದರಿಂದಾಗಿ ರಸ್ತೆಯಲ್ಲಿ ವಿಪರೀತ ಸಂಚಾರದಟ್ಟಣೆ ಉಂಟಾಗುತ್ತಿದ್ದು, ಜನಸಾಮಾನ್ಯರು ತೊಂದರೆ ಎದುರಿಸಬೇಕಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಸಾರ್ವಜನಿಕ ಜಾಗದಲ್ಲಿ ಈ ರೀತಿ ಪುತ್ತಳಿ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಇದೀಗ ಕಾನೂನುಬಾಹಿರವಾಗಿ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ಪುತ್ತಳಿ ತೆರವುಗೊಳಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯ ಪೀಠ ಪ್ರಕರಣ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಗೊಳಿಸಿ ಪುತ್ತಳಿ ಸ್ಥಾಪನೆ ಕಾರ್ಯ ಮುಂದುವರಿಸಬಾರದು ಹಾಗೂ ಜಿಲ್ಲಾಧಿಕಾರಿ ಸ್ಥಳದ ಸರ್ವೆ ಮಾಡಿ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಲಾಯಿತು.
ಜಿಲ್ಲಾಧಿಕಾರಿಗಳು ಸಾರ್ವಜನಿಕ ಭೂಮಿಯಲ್ಲಿ ಅನಧಿಕೃತ ಕಟ್ಟಡಗಳಿಂದ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
ಹೊಸ ಅತಿಕ್ರಮಣ ಮತ್ತು ಅಸ್ತಿತ್ವದಲ್ಲಿರುವ ರಚನೆಗಳ ಸ್ಥಿತಿಗತಿಗಳ ಕುರಿತು ಪ್ರತಿ ತಿಂಗಳು ರಾಜ್ಯದ ಸಂಬಂಧಪಟ್ಟ ಮುಖ್ಯ ಕಾರ್ಯದರ್ಶಿಗಳಿಗೆ ತಮ್ಮ ವರದಿಗಳನ್ನು ಕಳುಹಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಈ ವಿಷಯಗಳನ್ನು ಮುಖ್ಯ ಕಾರ್ಯದರ್ಶಿಗಳು ಮೂರು ತಿಂಗಳಿಗೊಮ್ಮೆ ನ್ಯಾಯಾಲಯದ ಮುಂದೆ ಅಫಿಡವೇಟ್ ಗಳನ್ನು ಸಲ್ಲಿಸಬೇಕು.
ಈ ವಿಷಯವಾಗಿ ಜನತೆ ಒಂದನ್ನು ಅರಿಯಬೇಕು, ಕನಿಷ್ಠ ರಾಜಕೀಯ ಸ್ಥಿರತೆ ಇಲ್ಲದ ಮುಳಬಾಗಿಲು ತಾಲೂಕಿನಂತಹ ಒಂದು ಕ್ಷೇತ್ರದಲ್ಲಿ, ಅದರಲ್ಲೂ ಇತಿಹಾಸದಲ್ಲಿ, ಇಲ್ಲಿಯವರೆಗೂ ಯಾವೊಬ್ಬ ರಾಜಕೀಯ ನಾಯಕನು ಮುಂದಿನ ಯುವ ಪೀಳಿಗೆಯ ಭವಿಷ್ಯದ ನಿಟ್ಟಿನಲ್ಲಿ ಏನನ್ನಾದರೂ ಮಾಡಿರುವ ಉದಾಹರಣೆಯೇ ಇಲ್ಲದಂತಹ ಪರಿಸ್ಥಿತಿಯಲ್ಲಿ. ಸಂವಿಧಾನವನ್ನು ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ತುಂಬ ಬೇಕಾದ ಜವಾಬ್ದಾರಿ ಇರಬೇಕಾದ ಪೋಷಕರು ಹಾಗೂ ಜವಾಬ್ದಾರಿಯುತನಾಗರಿಕರು, ಕಣ್ಣಿಗೆ ಕಾಣುವಂತೆ ಸಾಮರಸ್ಯವನ್ನು ಕೆದಡುವ ಹಾಗೂ ಜಾತಿಯ ಅಸಹಿಷ್ನತೆ ಮೂಡಿಸುವಂತಹ ವಾತಾವರಣಕ್ಕೆ ಪೂರಕವಾಗುವ, ಮೌನವನ್ನು ವಹಿಸಿರುವುದು ಎಷ್ಟು ಸರಿ ?
ಮುಳಬಾಗಿಲು ತಾಲೂಕು ಒಂದು ಮೀಸಲು ಕ್ಷೇತ್ರವಾಗಿದ್ದರೂ ಸಹ, ಇಲ್ಲಿಯವರೆಗೆ ಕಣ್ಣಿಗೆ ಕಾಣುವಂತೆ ಯಾವೊಬ್ಬ ನಾಯಕರುಗಳು ಮೀಸಲಾತಿಯ ವ್ಯವಸ್ಥೆಯನ್ನು ತಲುಪಿಸುವ ನಿಟ್ಟಿನಲ್ಲಿ, ಇಲ್ಲಿನ ಮೀಸಲಾತಿಗೆ ಒಳಪಡುವ ಪಂಗಡಗಳ ವಿದ್ಯಾವಂತ ಹಾಗೂ ಪ್ರಬುದ್ಧ ನಾಗರೀಕರನ್ನು ಗುರುತಿಸಿ ನಾಯಕತ್ವವನ್ನು ಬೆಳೆಸುವ ಹಾಗೂ ಅವರ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಸ್ವಾಭಿಮಾನಿ, ಸ್ವಾವಲಂಬನೆಯ ಸಬಲೀಕರಣದ ವ್ಯವಸ್ಥೆಯನ್ನು ಕಲ್ಪಿಸಿರುವುದು ಬಹಳ ವಿರಳ.
ಇನ್ನು ನಮ್ಮ ಭಾರತ ದೇಶ, ಒಂದು ಜಾತಿ ಅಥವಾ ಒಂದು ಧರ್ಮದಿಂದ ಎಂದಿಗೂ ಮುನ್ನಡೆಯುವುದಿಲ್ಲ ಎಂಬುದು ಎಲ್ಲರಿಗೂ ತಿಳಿಯಲೇಬೇಕಾದ ವಿಷಯ.
ಜಾತಿ ಎಂಬುದು ಅವರ ಸಾಂಪ್ರದಾಯಿಕ ಹಿನ್ನೆಲೆ ಹೊರತು, ಅವರ ಮರ್ಯಾದ, ಆದರ್ಶ ದಾಯಕ ವ್ಯಕ್ತಿತ್ವದಿಂದ ಮತ್ತೊಬ್ಬರಿಗೆ ಕೊಡುವ ಗೌರವವನ್ನು ಅಳೆದು, ಅದರದೇ ಆದ ಗೌರವ ಪಡೆಯುವ ವ್ಯವಸ್ಥೆ ಎಂಬುದನ್ನು ಇನ್ನಾದರೂ ಅರಿಯಬೇಕು.
ಮುಳಬಾಗಿಲು ತಾಲೂಕಿನ ಯಾವುದೇ ರಾಜಕೀಯ ಪಕ್ಷದವರಾಗಲಿ, ಅದು ರಾಷ್ಟ್ರೀಯ ಪಕ್ಷವಾಗಲಿ ಅಥವಾ ಪ್ರಾಂತೀಯ ಪಕ್ಷವಾಗಲಿ, ಅದರಲ್ಲಿ ಜಾತಿ ಆಧಾರದ ಮೇಲೆ ನಾಯಕತ್ವಗಳನ್ನು ಹಂಚಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಂತೆಯೇ ಜಾತಿ ಆಧಾರಿತ ಸಂಘಟನೆಗಳಾದ ಒಕ್ಕಲಿಗರ ಸಂಘ, ಆರ್ಯ ವೈಶ್ಯ ಸಂಘ, ದಲಿತ ಸಂಘ, ಗಾಣಿಗ ಕುರಬ ವಿಶ್ವಕರ್ಮ ಬಲಜಿಗ ಇತ್ಯಾದಿ ಇರುವುದು ಹಾಗೂ ಅವುಗಳ ನಾಯಕರುಗಳನ್ನು ನಾವು ಕಾಣುವುದು ಸಹಜವಾಗಿದೆ.
ಆದರೆ ವಿಪರ್ಯಾಸ ಎಂದರೆ ಇಲ್ಲಿ ಕಾಣುವ ಹೆಚ್ಚಿನ ಸಂಘಟನೆಗಳಲ್ಲಿ, ಇಲ್ಲಿಯವರೆಗೂ ಕಣ್ಣಿಗೆ ಕಾಣುವಂತೆ ಎಲ್ಲಿಯೂ ಸಾಮರಸ್ಯ ವೇದಿಕೆ, ಅಂದರೆ ಸಾಂಪ್ರದಾಯಿಕ ವ್ಯವಸ್ಥೆಯ ಜಾತಿ ಆಧಾರಿತ ಸಮಾಜದಲ್ಲಿ ಸಮಾನತೆ ನಿಟ್ಟಿನಲ್ಲಿ ಎಲ್ಲರನ್ನು ಒಂದೆಡೆ ಸೇರಿಸಿ, ಸಹಿಷ್ಣತೆಯ ಸಮಾಜವನ್ನು ಕಟ್ಟಿ, ಹಸಹಿಷ್ನತೆಯ ವಾತಾವರಣವನ್ನು ದೂರ ಮಾಡುವ ಹಾಗೂ ಕೆಲವು ಬಹಳ ವಿರಳ ಎನಿಸುವ ಜಾತಿ ಪದ್ಧತಿಯ ಹೀನ ಆಚರಣೆಗಳನ್ನು ತಿಳಿದು ಬಂದಾಗ ಅಥವಾ ಇಬ್ಬರ ಮಧ್ಯೆ ಜಾತಿ ಆಧಾರಿತ ಜಗಳವಾಗಿ ಅಟ್ರಾಸಿಟಿಗಳು ಕಂಡು ಬಂದಾಗ, ಹೆಚ್ಚಿನ ಸಂದರ್ಭಗಳಲ್ಲಿ ನಮಗೆ ಜಾತಿ ಆಧಾರಿತ ಸಂಘಟನೆಗಳ ಪಾರದರ್ಶಕ ವ್ಯವಸ್ಥೆಯಾಗಿ ಸಾಮರಸ್ಯ ವೇದಿಕೆಗಳ ಜವಾಬ್ದಾರಿ ನಿಲುವುಗಳು ಕಣ್ಣಿಗೆ ಕಾಣುವುದೇ ಇಲ್ಲ.
ಇಷ್ಟೆಲ್ಲ ವಿಷಯಗಳು ಏಕೆ ಹೇಳಬೇಕಾಗುತ್ತದೆ ಎಂದರೆ ಪ್ರಸಕ್ತ ಸೌಂದರ್ಯ ಸರ್ಕಲ್ ನಲ್ಲಿರುವ ಪುತ್ತಳಿಯ ಅಸ್ತಿತ್ವದ ವಿಚಾರ ಬಂದ ಕಾರಣ.
ಮೊದಲನೆಯದಾಗಿ ಯಾವುದೇ ರೀತಿಯ ಧಾರ್ಮಿಕ ಅಥವಾ ರಾಜಕೀಯ ಅಥವಾ ಯಾವುದೇ ನಾಯಕರ ಪುತ್ತಳಿಗಳನ್ನು ಅನುಷ್ಠಾನಗೊಳಿಸುವ ವಿಚಾರವಾಗಿ ಸರ್ವೋಚ್ಚ ನ್ಯಾಯಾಲಯವು ನಿರ್ಬಂಧ ಹೇರಿರುವ ವಿಚಾರ ಬಹಳ ವರ್ಷಗಳ ಹಿಂದೆಯಿಂದಲೂ ಎಲ್ಲರಿಗೂ ತಿಳಿಯಬೇಕಿತ್ತು ಹಾಗೂ ಇದರ ನಿಗ ವಹಿಸುವ ಜವಾಬ್ದಾರಿ ಕಾರ್ಯಾಂಗ ವ್ಯವಸ್ಥೆಯಲ್ಲಿ ತಹಸೀಲ್ದಾರ್ ಮತ್ತು ಪೌರಾಯುಕ್ತರಿಗೆ ಇರಲೇಬೇಕಾಗಿತ್ತು.
ಆದರೆ ಕೆಲವು ರಾಜಕೀಯ ವ್ಯವಸ್ಥೆಯ ಲೋಭಿ ಮಾಡುವ ನಿಟ್ಟಿನಲ್ಲಿ ಬೆಲೆ ಕಟ್ಟಲಾಗದ ಗೌರವ ಮರ್ಯಾದೆಗಳನ್ನು ಗಳಿಸಿ ನಮ್ಮೆಲ್ಲರನ್ನು ಅಗಲಿದ ಹಿರಿಯರನ್ನು ಮತ್ತು ಧಾರ್ಮಿಕ ಗುರುಗಳನ್ನು ತಮ್ಮ ರಾಜಕೀಯ ದುರಾಲೋಚನೆಯಿಂದ ದುರ್ಬಳಕೆ ಮಾಡಿಕೊಳ್ಳುವ ಮಟ್ಟಕ್ಕೆ ಬಳಸಿಕೊಳ್ಳುತ್ತಿರುವುದು ಬಹಳ ಬೇಜಾರಿನ ಸಂಗತಿ ಹಾಗೂ ಸಂವಿಧಾನವನ್ನು ಕಟ್ಟಿದ ಮಹನೀಯರಾದ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಜಿ ರವರ ಅಸ್ಮಿತೆಯನ್ನು ಪ್ರಶ್ನಾರ್ತಿತವಾಗಿ ಮಾಡುವಂತಹ ವಿಚಾರವೂ ಆಗಿರುತ್ತದೆ, ಏಕೆಂದರೆ ನಾವು ಒಬ್ಬ ವ್ಯಕ್ತಿಗೆ ಕೊಡುವ ಗೌರವ ಎಂದರೆ ಅವರು ತೋರಿದ ಆದರ್ಶ ಪೂರ್ವಕ ಮಾರ್ಗದಲ್ಲಿ ನಡೆದು ಮುಂದೆ ಸಾಗುವುದು. ಆದರೆ ವಿಪರ್ಯಾಸ ಇಂದು ಅನೇಕರು ಅಂತಹ ವಿಚಾರಧಾರೆಯನ್ನು ಮರೆತು ಅವರ ಪುತ್ತಳಿಗಳನ್ನು ಇಟ್ಟು, ಅದು ಎಷ್ಟೇ ರೀತಿಯ ಕಸ ಹಾಗೂ ನಿರ್ವಹಣಾ ಲೋಪವನ್ನು ಎದುರಿಸಿದರು ಕನಿಷ್ಠ ಸೌಜನ್ಯತೆ ಇಲ್ಲದೆ ತಮ್ಮಷ್ಟಕ್ಕೆ ತಾವು ಇದ್ದುಕೊಂಡು ವರ್ಷಕ್ಕೊಮ್ಮೆ ಅಥವಾ ಅವರ ರಾಜಕೀಯ ಸ್ವಾರ್ಥಕ್ಕೊಮ್ಮೆ ಸ್ವಚ್ಛ ಮಾಡಿ ಅಲಂಕರಿಸಿ ಅವಮಾನಿಸುತ್ತಿರುವ ವಾಸ್ತವಂಶ ಎಲ್ಲರೂ ನೋಡಬಹುದು.
ಪ್ರಸಕ್ತ ಪುತ್ತಳಿಯ ವಿಚಾರವಾಗಿ ಹೇಳುವುದಾದರೆ, ಕಾನೂನು ಬದ್ಧವಾದ ದಾಖಲಾತಿಗಳನ್ನು ಹಾಗೂ ಸಮುದಾಯಿಕ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಾದರೂ, ಸರಿಯಾದ ಕಾನೂನು ವ್ಯವಸ್ಥೆಯನ್ನು ಅನುಸರಿಸುವ ನಿಟ್ಟಿನಲ್ಲಿ ಬೇಜಾರ್ವಾರಿತನ ತೋರಿರುವ ಸಂಘಟನೆ ಒಂದು ಕಡೆಯಾದರೆ, ಭ್ರಷ್ಟಾಚಾರದ ಉತ್ತುಂಗದ ನಶೆಯಲ್ಲಿರುವ ಕಾರ್ಯಾಂಗದ ದೇಶದ್ರೋಹಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಇದನ್ನೆಲ್ಲ ಪ್ರಸಕ್ತ ಯುವತೆಯೂ ಗಮನಿಸುತ್ತಿದೆ ಎಂಬುದನ್ನು ನಾವು ಇಲ್ಲಿ ಮರೆಯಬಾರದು.
ಇನ್ನು ಪ್ರಸಕ್ತ ಪುತ್ತಳಿ ಇರುವ ಸ್ಥಳ ಮುಳಬಾಗಿಲು ತಾಲೂಕು ಒಕ್ಕಲಿಗರ ಸಂಘದ ಹೆಸರಿನಲ್ಲಿ ಇರುವುದರಿಂದ, ಸಮುದಾಯಿಕ ಭಾವನೆಯೇ ಹೆಚ್ಚು ತುಂಬಿರುವುದು ಸಹಜ, ಆದರೆ ವಿಪರ್ಯಾಸ ಎಂದರೆ ನಾಡಪ್ರಭು ಶ್ರೀ ಕೆಂಪೇಗೌಡರು ಜಾತ್ಯತೀತ ಸಾಮಾಜಿಕ ವ್ಯವಸ್ಥೆಯ ಸಂವಿಧಾನಕ್ಕೂ ಮುಂಚೆಯೇ ಸಾಮರಸ್ಯವನ್ನು ಸೃಷ್ಟಿಸಿ ನಾಡು ಕಟ್ಟಿದ ಮರ್ಯಾದ ಪುರುಷರು ಆಗಿದ್ದರೂ ಸಹ, ಅಂತಹವರ ವಿಷಯದಲ್ಲಿ ರಾಜ್ಯದ ಯಾವುದೇ ಕಡೆ ನಡೆಯದ ಚಟುವಟಿಕೆಯೊಂದು ತಲೆ ಎತ್ತುತ್ತಿರುವುದು ರಾಜಕೀಯ ಪ್ರೇರಿತ, ಎಂದು ತಿಳಿದಿದ್ದರೂ ಸಹ, ಒಬ್ಬ ಸಮಾಜಮುಖಿ ನಾಯಕನನ್ನು ಒಂದು ಜಾತಿಗೆ ಮೀಸಲು ಮಾಡಿ, ತಾಲೂಕಿನಲ್ಲಿ ಇರುವ ಯಾವೊಬ್ಬ ನಾಗರಿಕ ಅಥವಾ ಸಂಘಟನಾತ್ಮಕ ಚಟುವಟಿಕೆಯಲ್ಲಿ ಇರುವ ಯಾವುದೇ ಸಂಘ, ಈ ವಿಚಾರವಾಗಿ ಪ್ರಶ್ನೆ ಮಾಡದಿರುವುದೇ ಬಹಳ ನೋವಿನ ಸಂಗತಿ.
ಒಂದು ವೇಳೆ ನ್ಯಾಯಾಂಗ ವ್ಯವಸ್ಥೆಯನ್ನು ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮತ್ತೊಂದು ಜಾತಿಯ ವ್ಯಕ್ತಿ ಅಥವಾ ಸಂಘಟನೆ, ಇದೇ ಪ್ರಶ್ನೆ ಮಾಡಿದ್ದರೆ, ಇದೇ ರಾಜಕೀಯ ಪುಡಾರಿಗಳು ಜಾತಿ ಮತ್ತು ಜಾತಿಯ ಮಧ್ಯೆ ಒಡಕುಗಳನ್ನು ಬೆಳೆಸಿ ಸಮಾಜದ ಸಾಮರಸ್ಯವನ್ನು ಕದಡುತ್ತಿದ್ದರು ಎಂಬುದು ಸುಳ್ಳಲ್ಲ.
ಈ ಎಲ್ಲಾ ಸೂಕ್ಷ್ಮತೆಗಳನ್ನು ಒಳಗೊಂಡಂತೆ ಬಹಳ ತಾಳ್ಮೆ ಮತ್ತು ಸಾಮಾಜಿಕ ಐಕ್ಯತ ಹಿತಾಸಕ್ತಿಯಿಂದ, ಮುಂದೊಂದು ದಿನ ಆಗಬಹುದಾದ, ಒಂದು ಸಾಮಾಜಿಕ ವ್ಯವಸ್ಥೆಯ ಅಡಿಯಲ್ಲಿ ಕೃಷಿ ಅವಲಂಬಿತ ಸಮಾಜವೆಂದೆ ಪರಿಗಣಿಸಲ್ಪಟ್ಟ ಒಕ್ಕಲಿಗ ಸಮುದಾಯದ ನಾಗರಿಕರಿಗೆ, ಅವರ ಗೌರವಕ್ಕೆ ಆಗಬಹುದಾದ ಧಕ್ಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ, ಸಮಾಜದಲ್ಲಿ ಎಲ್ಲರನ್ನು ಸಾಮರಸ್ಯ ಮತ್ತು ಸಮಾನತೆಯಿಂದ, ಗೌರವ ಪೂರ್ವಕವಾಗಿ ನಡೆಸಿಕೊಳ್ಳುವ ಹಾಗೂ ಅಂತಹ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಹೊಂದಿರುವಂತಹ ವೇದಿಕೆಯಾಗಿ ನಾವು ಮುಳಬಾಗಿಲು ನಾಗರಿಕ ವೇದಿಕೆ ಬಹಳ ಪ್ರಬುದ್ಧತೆಯಿಂದ, ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ, ತಮ್ಮ ಬೇಜವಾಬ್ದಾರಿತನದ ವರ್ತನೆಗೆ ತಕ್ಕ ಪಾಠ ಕಲಿಸುವ ಹಾಗೂ ಸಮಾಜದಲ್ಲಿ ಸಂಘಟನೆಗಳನ್ನು ಮತ್ತು ಸಮುದಾಯಗಳನ್ನು ಭ್ರಷ್ಟಾಚಾರದಿಂದ ರಾಜಕೀಯದ ವ್ಯವಸ್ಥೆಗೆ ಸಂವಿಧಾನವನ್ನು ಮಾರುವಂತಹ ರಾಷ್ಟ್ರ ದ್ರೋಹಿಗಳಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಪಣತೊಟ್ಟಿತು.
ಇದೇ ಕಾರಣಕ್ಕಾಗಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ, ಹಾಗೂ ಮುಂದಿನ ಯುವ ಪೀಳಿಗೆಗೆ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಭಾರತ ದೇಶದ ಸಾರ್ವಭೌಮತ್ವದ ಸಂವಿಧಾನಿಕ ಮೌಲ್ಯಗಳನ್ನು ಹಾಗೂ ಅದರ ಮೇಲಿನ ನಂಬಿಕೆಗಳನ್ನು ಉಳಿಸುವ ನಿಟ್ಟಿನಲ್ಲಿ, ಕಾನೂನು ಹೋರಾಟ ಮಾಡಲೇಬೇಕಾದ ಅವಶ್ಯಕತೆ ಇದ್ದ ಕಾರಣ, ಪಣತೊಡಬೇಕಾಯಿತು.
ಇನ್ನು ಪ್ರಕರಣವನ್ನು ನ್ಯಾಯಾಂಗಕ್ಕೆ ವಹಿಸಿರುವ ಕಾರಣ ಮುಂದಿನ ವಿಷಯವನ್ನು ಕಾದು ನೋಡಬೇಕು.
Leave a Reply