media BHARATH

Defining Ethical Journalism

ಮುಳಬಾಗಿಲು ಆಡಳಿತ ವ್ಯವಸ್ಥೆಯ ನಿರ್ವಹಣಾ ವೈಫಲ್ಯ:ಪ್ರತಿನಿತ್ಯ ಕಣ್ಣಿಗೆ ಕಾಣುವ ಪ್ರಮುಖವಾದಂತಹ ಸಿಗ್ನಲ್ ಸರ್ಕಲ್ ವಿಚಾರವಾಗಿನ ನಾಚಿಕೆಗೇಡಿನ ನಿರ್ವಹಣೆಗೆ ಯಾರು ಹೊಣೆ!ಶಾಸಕರೇ ನೀವು ಏನು ಮಾಡುತ್ತೀರಿ?

ಈ ವಿಷಯದ ಹಿಂದೆ ಸಿಗ್ನಲ್ ಕಾಂಟ್ರಾಕ್ಟ್ ಮಾಡುವ ಕಾಂಟ್ರಾಕ್ಟರ್ದಾರರು ನಿಜಕ್ಕೂ ನಮ್ಮ ಕ್ಷೇತ್ರದ ಶಾಸಕರಿಗಿಂತಲೂ ಬಹಳ ಚಾಣಾಕ್ಷರು ಎಂದು ಹೇಳಬಹುದು, ಉದ್ಘಾಟನೆಯೇ ಆಗದ ಹಾಗೂ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದ, ಅರ್ಧಕಮಗಾರಿಯಲ್ಲಿ ಸ್ಥಗಿತವಾಗಿರುವ, ಸರ್ಕಲ್ ನ ಹತ್ತಿರ ಅದೇನು ಮಾಯೆಯು ಎಂಬಂತೆ ಸಿಗ್ನಲ್ ಸ್ಥಾಪಿಸಿ, ಎಲ್ಲೆಡೆ ಜನರಲ್ಲಿ ಭರವಸೆ ಮೂಡಿಸಲು ಪ್ರಯತ್ನ ಪಟ್ಟ ಎಲ್ಲರಿಗೂ ಮುಳಬಾಗಿಲು ನಾಗರಿಕರು ಶ್ಲಾಗನೆ ನೀಡಲೇಬೇಕು.

ಈಗಾಗಲೇ ಕೆ ಬೈಯಪಲ್ಲಿ ರಸ್ತೆ, ಮಲ್ಲನಾಯಕನಹಳ್ಳಿ ರಸ್ತೆ, ಮಾರ್ಕೆಟ್ ರಸ್ತೆ, ಮುಳಬಾಗಿಲಿನಿಂದ ಹಾದುಹೋಗುವ ಮುಖ್ಯ ರಸ್ತೆಯ ಎರಡು ದಿಕ್ಕುಗಳು ಸೇರಿ ಒಟ್ಟು ಐದು ಪ್ರಮುಖ ರಸ್ತೆಗಳನ್ನು ಸೇರಿಸುವ ಸರ್ಕಲ್ ನ ವ್ಯವಸ್ಥೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂಬಂತಹ ವಾತಾವರಣವನ್ನು ಆಡಳಿತದ ಮೇಲೆ ಏರಿದೆ… ಈ ವಿಚಾರವಾಗಿ ಜೆಡಿಎಸ್ ನ ಪ್ರಸಕ್ತ ಕುಮಾರಣ್ಣನ ನೆಚ್ಚಿನ ಮುಳಬಾಗಿಲಿನ ಮೀಸಲಾತಿ ಕ್ಷೇತ್ರದ ಶಾಸಕರು ಸಮೃದ್ಧಿ ಮಂಜುನಾಥ್ ತಮ್ಮ ಚುರುಕಾದ ರಾಜಕೀಯಕ್ಕೆ ಹೆಸರುವಾಸಿಯಾದರು ಸಹ ಈ ವಿಷಯವಾಗಿ ಮುಳಬಾಗಿಲಿಗೆ ಬಂದಾಗಲೆಲ್ಲ ಇದೇ ಮಾರ್ಗವಾಗಿ ಹಾದಿ ಹೋದರು ಏಕೆ ಏನು ಪ್ರಯೋಜನ ಕಾಣುತ್ತಿಲ್ಲ ಎಂಬುದು ಜನರಲ್ಲಿ ಆಘಾತ ಉಂಟು ಮಾಡಿದೆ. ಈ ವಿಷಯವಾಗಿ ಪ್ರಸಕ್ತ ತಾಲೂಕಿಗೆ ಭೇಟಿ ಮಾಡುವ ಜಿಲ್ಲಾ ಆಡಳಿತದ ಪ್ರಮುಖರು ಇದೇ ರಸ್ತೆಯಿಂದ ಹಾದು ಹೋಗಿ ತಾಲೂಕು ಆಡಳಿತ ಕಚೇರಿಗೆ ತಲುಪಬೇಕು. ಹಾಗಿದ್ದರೆ ಅವರಿಗೆ ಈ ಲೋಪ ಕಾಣುತ್ತಿಲ್ಲವೇ? ಒಂದು ವೇಳೆ ಕಂಡರು ಏಕೆ ಸುಮ್ಮನಿದ್ದಾರೆ ಎಂಬುದು ಅವರ ಕಾರ್ಯ ವ್ಯಾಪ್ತಿಯ ಬೇಜವಾಬ್ದಾರಿತನವು ಅಥವಾ ಭ್ರಷ್ಟಾಚಾರದ ಪರಮಾವಧಿಯೋ ಎಂದು ವಿಮರ್ಶೆ ಮಾಡಿಕೊಳ್ಳುವ ಮಟ್ಟಕ್ಕೆ ಜನ ತಲುಪುತ್ತಿದ್ದಾರೆ.

ಇದರೊಂದಿಗೆ ಮುಳಬಾಗಿಲು ನಗರದ ದಕ್ಷ ಪೊಲೀಸ್ ಇನ್ಸ್ಪೆಕ್ಟರ್ ಬಹಳ ನಿಷ್ಠೆಯಿಂದ ಯಾವುದೇ ಭ್ರಷ್ಟಾಚಾರ ಇಲ್ಲದೆ, ಪ್ರತಿಯೊಬ್ಬರನ್ನು ಸಮನಾಗಿ ಕಾಣುತ್ತಾ, ಸಂಚಾರಿ ಪೊಲೀಸ್ ಮಾಡುವ ಕೆಲಸ ನಿರ್ವಹಿಸುತ್ತಿರುವುದು ಒಂದು ಕಡೆ ಶ್ಲಾಘನೀಯ, ಆದರೂ ಈಗಾಗಲೇ ಯಾವುದೇ ರೀತಿಯ ಕಾಮಗಾರಿಗಳನ್ನು ಬರಿ ಉದ್ಘಾಟನೆಗೆ ಸೀಮಿತ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿರುವ ಸಿಗ್ನಲ್ ಸರ್ಕಲ್ ಅವ್ಯವಸ್ಥೆಯನ್ನು ಗಮನಿಸಿ, ತಮ್ಮ ಫೈನ್ ಹಾಕುವ ಹಾಗೂ ಪಾರ್ಕಿಂಗ್ ಗಾಡಿಗಳನ್ನು ಹಿಡಿಯುವ ಹೆಚ್ಚಿನ ಜವಾಬ್ದಾರಿಯನ್ನು ಕೊಂಚ ಸಡಿಲೀಕರಣ ಗೊಳಿಸಿ ಸಾರ್ವಜನಿಕರಿಗೆ ಮೊದಲು ಮಾಹಿತಿಯನ್ನು ತಿಳಿಸಿ ನಂತರ ಒಂದಿಷ್ಟು ಸಿಗ್ನಲ್ ಸರ್ಕಲ್ ಆಗುವವರೆಗೆ, ಮಾನವೀಯ ದೃಷ್ಟಿಯನ್ನು ಮರೆಯಬೇಕು ಎಂದು ಹಲವಾರು ಸಾರ್ವಜನಿಕರ ಮಾತುಗಳಾಗಿವೆ..

ಅದೇನೆ ಇರಲಿ ಭ್ರಷ್ಟಾಚಾರ ಎಷ್ಟೇ ಮುಂದುವರೆಯಲಿ ಕನಿಷ್ಠ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಬರುವ ಜಿಲ್ಲೆ ಮತ್ತು ತಾಲೂಕು ಅಧಿಕಾರಿಗಳು ಯಾವುದೇ ಮಟ್ಟದ ಜನಸೇವಕರಾಗಲಿ, ಕನಿಷ್ಠ ತಾವು ಓಡಾಡುವ ಹಾದಿಯಲ್ಲಾದರೂ ಮುತುವರ್ಜಿಯಿಂದ ಕಾರ್ಯದಕ್ಷತೆ ತೋರಿದರೆ ಭಾರತ ದೇಶದ ಪ್ರಜೆಯಾಗಿ ಪ್ರತಿಯೊಬ್ಬರು ಅವರಿಗೆ ಋಣಿಯಾಗಿರುವುದರಲ್ಲಿ ಸಂಶಯವೇ ಇಲ್ಲ. ಇಲ್ಲವಾದ ಪಕ್ಷದಲ್ಲಿ ಪ್ರತಿಯೊಂದು ನ್ಯಾಯಯುತ ನಡೆಗೆ ನ್ಯಾಯಾಂಗ ವ್ಯವಸ್ಥೆಯನ್ನೇ ಕೇಳುವುದಾದರೆ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಸಂಬಳ ಕೊಟ್ಟು ನಾವು ಏಕೆ ಪೋಷಿಸಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಅಳಲಾಗಿದೆ.

Leave a Reply

Your email address will not be published. Required fields are marked *