media BHARATH

Defining Ethical Journalism

ಮುಳಬಾಗಿಲು ತಾಲೂಕಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮತ್ತು ಆಘಾತಕಾರಿ ಘಟನೆ?

ಹೆಣ್ಣು ಮಕ್ಕಳಿಗೆ ಕಲ್ಪಿಸಿ ಕೊಟ್ಟಿದ್ದ ಹೆಣ್ಣು ಮಕ್ಕಳ ಪ್ರತ್ಯೇಕ ಶಾಲೆಯಾಗಿದ್ದ ಡಿ.ವಿ.ಜಿ. ಶಾಲೆಯು, ಕೋ-ಎಜುಕೇಶನ್ ಗೆ ಬಂದಿರುವುದು ಆಘಾತಕಾರಿ ಒಂದು ಕಡೆಯಾದರೆ, ಅದನ್ನು ಮುಂದುವರಿಸಿ ಮಹಿಳಾ ಶಿಕ್ಷಕಿಯರ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣ ಇಡೀ ಮಹಿಳಾ ಸಮುದಾಯ ಹಾಗೂ ತಾಲೂಕು ತಲೆತಗ್ಗಿಸುವಂತೆ ಮಾಡಿರುವುದೇ ಅಲ್ಲದೆ, ಪ್ರಸಕ್ತ ಅಷ್ಟೊಂದು ಬಲಿಷ್ಠತೆಯಿಂದ ಚುನಾವಣೆಯನ್ನು ಮಾಡಿ ದೇವೇಗೌಡರಂತಹ ಹಿರಿಯ ನಾಯಕರನ್ನು ಮುಳಬಾಗಿಲಿಗೆ ಕರೆಸಿ, ಪ್ರಸಕ್ತ ಕುಮಾರಸ್ವಾಮಿ ಅಂತಹ ನಾಯಕರನ್ನು ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಕೂರಿಸಿ, ಮುಳಬಾಗಿಲು ತಾಲೂಕಿನಲ್ಲಿ ಗೆದ್ದಿರುವ ಜನಪ್ರಿಯ ಶಾಸಕರ ಅಸ್ತಿತ್ವಕ್ಕೆ ಈ ಪ್ರಕರಣ ಒಂದು ದೊಡ್ಡ ಸವಾಲಾಗಿದೆ.

ಇಂದು ಮುಳಬಾಗಿಲು ತಾಲೂಕಿನಲ್ಲಿ ಬಹಳ ಶ್ರದ್ಧಾ ಭಕ್ತಿಗಳಿಂದ ಮತ್ತು ಉತ್ಸಾಹದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡಮ್ಮನ ಸೇವೆಯ ಒಂದು ಭಾಗವಾಗಿರುವ ಸಹೃದಯಿ ಮುಳಬಾಗಿಲು ತಾಲೂಕಿನ ಎಲ್ಲಾ ನಾಗರಿಕರು ಹಾಗೂ ನಾಡಿನ ಸಮಸ್ತ ಕನ್ನಡಮ್ಮನ ಮಕ್ಕಳಿಗೆ ಮತ್ತಷ್ಟು ಗೌರವ ಮೂಡುವಂತಹ ಕಾರ್ಯಕ್ರಮ ಮಾದರಿಯಾಗಿ ಯಶಸ್ವಿಯಾಯಿತು. ಇದಕ್ಕೆ ಮೂಲ ಯಶಸ್ಸಿನ ಕೇಂದ್ರ ಬಿಂದುವಾಗಿ ನಮ್ಮ ಜನಪ್ರಿಯ ಶಾಸಕರಾದ ಸಮೃದ್ಧಿ ವಿ. ಮಂಜುನಾಥ್ ಹಾಗೂ ತಾಲೂಕಿನ ಎಲ್ಲಾ ಸಂಘಟನೆಗಳು ಮತ್ತು ಪ್ರಮುಖವಾಗಿ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಪ್ರೇಮಿಗಳ ಮುತುವರ್ಜೆ ಹಾಗೂ ಸಂಘಟನಾ ಶಕ್ತಿಯೇ ಕಾರಣವಾಗಿದೆ. ಇವರೆಲ್ಲರಿಗೂ ನಮ್ಮ ಮುಳಬಾಗಿಲು ತಾಲೂಕಿನ ಎಲ್ಲಾ ನಾಗರಿಕರ ಪರವಾಗಿ ಮತ್ತು ಸಮಸ್ತ ನಾಡಿನ ಹೆಮ್ಮೆಯ ಕನ್ನಡಿಗರ ಪರವಾಗಿ ನಮ್ಮ ಡಿಜಿಟಲ್ ಮಾಧ್ಯಮದ ಅಭಿನಂದನೆಗಳು.

ಇದೇ ಸಂದರ್ಭದಲ್ಲಿ ಮತ್ತೊಂದು ಆಘಾತಕಾರಿ ವಿಷಯ ಕಣ್ಮುಂದೆ ನಡೆಯಿತು. ಯಾರೂ ಒಬ್ಬರು ಪ್ರಶ್ನಿಸದೆ, ಕಾಳಜಿ ವಹಿಸದೆ, ಕನಿಷ್ಠ ಶಾಸಕರ ಗಮನಕ್ಕೂ ಬಾರದಂತೆ ನಡೆದಿರುವ ಹಗರಣ ಅಥವಾ ಸಮಸ್ತ ಮುಳಬಾಗಿಲು ತಾಲೂಕಿನ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಮೋಸ ಮಾಡಿರುವ ಪ್ರಕರಣ ಇದಾಗಿದೆ.

ಸದಾ ಕಾಲ ರಾಜಕೀಯ ಎಂದರೆ ಕಪ್ಪು ಹಣದ ವ್ಯವಹಾರ, ದೇಶದ್ರೋಹಿ ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುವ ಸ್ವಾಭಿಮಾನವಿಲ್ಲದ ಮನುಷ್ಯರು ಎಂಬ ಹೆಸರಿನ ಕುದುರೆ ವ್ಯಾಪಾರ, ಹಾಗೂ ಯುವಕರನ್ನು ಹಣ ಮತ್ತು ಹೆಂಡಕೊಟ್ಟು ಅವರ ಭವಿಷ್ಯವನ್ನು ಬೀದಿಗೆ ಬಿಟ್ಟು, ಬೆಂಗಳೂರಿನಲ್ಲಿ ಜಮ್ ಎಂದು ಬದುಕುವ, ಐದು ವರ್ಷಕ್ಕೊಮ್ಮೆ ನಡೆಯುವ ಐಪಿಎಲ್ ಮ್ಯಾಚ್ ನಂತೆ ವಿಮರ್ಶಗೊಳ್ಳುತ್ತಿದ್ದ, ಹಾಗೂ ರಾಜ್ಯದಲ್ಲಿ ಅತಿ ಹೆಚ್ಚು ಸರ್ಕಾರಿ ಭೂಮಿಯನ್ನು ಕಬಳಿಸಿರುವ, ತಮ್ಮ ದುರಾಡಳಿತದಿಂದ ಭ್ರಷ್ಟಾಚಾರದಿಂದ ರಾಜ್ಯದಲ್ಲಿ ಅತಿ ಹೆಚ್ಚು ಹಣ ಗಳಿಸಿರುವ, ಭ್ರಷ್ಟ ಕಂದಾಯ ಇಲಾಖೆಯ ಕುಖ್ಯಾತಿ ಪಡೆದಿರುವ ಹಾದಿಯಲ್ಲಿದ್ದ ಮುಳಬಾಗಿಲು ತಾಲೂಕನ್ನು, ನಮಗೆ ಅವಕಾಶ ಕೊಟ್ಟರೆ, ತಾಲೂಕಿನಲ್ಲಿ ಮನೆ ಮಾಡಿ ಇಲ್ಲೇ ಇದ್ದು, ತಮಗೆ ಅವಕಾಶ ಕಲ್ಪಿಸಿದ ಜನರನ್ನು ಪ್ರತಿದಿನ ಭೇಟಿಯಾಗಿ, ತಾಲೂಕಿನ ಪ್ರಸಕ್ತ ವಾತಾವರಣವನ್ನು ಬದಲಾಯಿಸುವ ಆಶಾಕಿರಣವಾಗಿ ಮುಳಬಾಗಿಲಿಗೆ ಬಂದ ನಮ್ಮ ಜನಪ್ರಿಯ ಶಾಸಕರಾದ ಸಮೃದ್ಧಿ ವಿ. ಮಂಜುನಾಥ್ ರವರು, ನುಡಿದಂತೆ ನಡೆಯುತ್ತಾ, ರಾಜಕೀಯದಲ್ಲಿ ಹಲವಾರು ವರ್ಷ ಬೇರುಬಿಟ್ಟ ರಾಜಕೀಯ ಕುಖ್ಯಾತಿಯುಳ್ಳ ಅನೇಕ ನಾಯಕರು ಎಂದು ಅನಿಸಿಕೊಂಡು, ಯುವಕರಿಗೆ ಅವಕಾಶಗಳನ್ನು ಕೊಡದೆ ಇರುವ ಅನೇಕರನ್ನು ಮಟ್ಟ ಹಾಕಿ, ನಗರಸಭೆ ಮತ್ತು ಕಂದಾಯ ಇಲಾಖೆಯ ಭ್ರಷ್ಟ ವ್ಯವಸ್ಥೆಯ ವಿರುದ್ಧ ಸದಾ ಕಾಲ ಸರಿ ಮಾಡುವ ಆಲೋಚನೆಯನ್ನು ಮಾಡುತ್ತಾ, ಮುಂಬರುವ ದಿನಗಳಲ್ಲಿ ಇಲ್ಲಿರುವ ಭ್ರಷ್ಟರನ್ನು ಕಾನೂನಿನ ವ್ಯಾಪ್ತಿಗೆ ಶಿಕ್ಷೆಗೊಳಪಡಿಸುವ ಎಲ್ಲಾ ನಂಬಿಕೆಗಳನ್ನು ಜನರಲ್ಲಿ ಮೂಡಿಸಿರುವುದು ಎಲ್ಲರಿಗೂ ತಿಳಿದಿರುವ ಮಾತಾಗಿದೆ.

ಇಂತಹ ಜನಪ್ರಿಯ ಶಾಸಕರು ಮುಳಬಾಗಿಲು ತಾಲೂಕಿನ ಯುವಕರಿಗೆ ಅವಕಾಶ ಕಲ್ಪಿಸುವಲ್ಲಿ ಪಣತೊಟ್ಟಿರುವ ನಿಜವಾದ ವಿಶ್ವಾಸಿ ಸಮೃದ್ಧಿ ವಿ. ಮಂಜುನಾಥ್ ರವರ ಕಣ್ಣು ತಪ್ಪಿಸಿ, ಮುಳಬಾಗಿಲು ತಾಲೂಕಿನಲ್ಲಿ ನಮ್ಮ ಇಡೀ ತಾಲೂಕಿನ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಕಲ್ಪಿಸಿಕೊಟ್ಟ ಒಂದೇ ಒಂದು ಅವಕಾಶವನ್ನು ಮಟ್ಟ ಹಾಕಿ, ಮಕ್ಕಳಿಗೆ ಮೋಸ ಮಾಡಿರುವ ಮಹಾ ಹಗರಣ ಏನೆಂದು ತಿಳಿಯೋಣ. ಈ ವಿಷಯವನ್ನು ಶಾಸಕರು ಗಮನಕ್ಕೆ ತೆಗೆದುಕೊಂಡು, ಈ ಕೂಡಲೇ ಶಿಸ್ತಿನ ಕ್ರಮ ಹಾಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಮುಳಬಾಗಿಲು ತಾಲೂಕಿನ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಅಭಯ ಹಸ್ತ ನೀಡಿ, ಸಂವಿಧಾನವನ್ನು ಎತ್ತಿ ಹಿಡಿಯಬೇಕು. ನಮ್ಮ ತಾಲೂಕಿನಲ್ಲಿ ಸಂವಿಧಾನವನ್ನು ಕಾಪಾಡುವ ಬದಲು ಅದನ್ನು ದುರುಪಯೋಗಪಡಿಸಿಕೊಳ್ಳುವುದು ಸರ್ವೇಸಾಮಾನ್ಯ ಆಗುವ ನಿಟ್ಟಿನಲ್ಲಿ ಬೆಳೆದಿದೆ.

ಮುಳಬಾಗಿಲು ತಾಲೂಕಿನ ಹೆಮ್ಮೆಯ, ನಮ್ಮೆಲ್ಲರ ಅಜ್ಜ ಎಂದೆ ಖ್ಯಾತರಾಗಿರುವ ಡಿ.ವಿ.ಜಿ. ಯವರ ಹೆಸರಿನ ಹೆಣ್ಣು ಮಕ್ಕಳ ಶಾಲೆ ಇಂದು ಮುಳಬಾಗಿಲಿನಲ್ಲಿ ಮಾಯವಾಗಿದೆ. ಡಿ.ವಿ.ಜಿ. ಅವರ ನೆನಪುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇರಬೇಕಾದ ತಾಲೂಕಿನ ಆಡಳಿತ ಹಾಗೂ ಅದಕ್ಕೆ ಸಂಬಂಧಪಟ್ಟ ಇಲಾಖೆಗಳು, ಹಣ ಮತ್ತು ಭ್ರಷ್ಟಾಚಾರದ ಆಸೆಗೆ, ಸರಿಯಾದ ಅಕೌಂಟೆಬಿಲಿಟಿ ಇಲ್ಲದ ಅಂದರೆ ಲೆಕ್ಕವಿಲ್ಲದ ವಿಲೇವಾರಿಗಳನ್ನು ಮಾಡಿರುವುದೇ ಅಲ್ಲದೆ, ಬಹಳ ಬೆಲೆಬಾಳುವ ಡಿ.ವಿ.ಜಿ. ಅವರ ನೆನಪುಗಳನ್ನು ಅಡಗಿಸಿಕೊಂಡಿದ್ದ ಮನೆಯ ಮರದ ಕಂಬಗಳು ಹಾಗೂ ಇನ್ನಿತರ ಬಹುಮೌಲ್ಯ ವಸ್ತುಗಳನ್ನು ಮಾಯ ಮಾಡಿ ಕಟ್ಟಡವನ್ನು ಕಟ್ಟಿಸಿ ದೊಡ್ಡತನವನ್ನು ತೋರಿಸಿಕೊಳ್ಳುವ ನಾಟಕವಾಡುವುದಲ್ಲದೆ, ಇಡೀ ಮುಳಬಾಗಿಲು ತಾಲೂಕಿಗೆ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕಿಸಿ ಒಳ್ಳೆಯ ವ್ಯವಸ್ಥೆ ಇದ್ದಂತಹ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಾದ ಡಿ.ವಿ.ಜಿ. ಶಾಲೆಯನ್ನು ಕೊ-ಎಜುಕೇಶನ್ ಮಾಡುವುದಲ್ಲದೆ, ಅನೇಕ ಹಗರಣಗಳನ್ನು ಮಾಡಿರುತ್ತದೆ. ಇದಲ್ಲದೆ, ಪ್ರಸಕ್ತ ಇದೇ ಶಾಲೆಯಲ್ಲಿ ಮಹಿಳೆಯರ ಮೇಲೆ, ಅದರಲ್ಲೂ ಕರ್ತವ್ಯ ನಿರತ ಶಿಕ್ಷಕಿಯರ ಮೇಲೆ, ಇದೇ ಶಾಲೆಯ ಮುಖ್ಯೋಪಾಧ್ಯಾಯ ದುರ್ನಡತೆ ಮತ್ತು ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ಬರುವಂತಹ ಪ್ರಕರಣಗಳನ್ನು ದಾಖಲಿಸಿದೆ. ಈ ವಿಷಯವು ನಮ್ಮ ಜನಪ್ರಿಯ ಶಾಸಕರಿಗೂ ತಲುಪಿರುವುದು, ಒಂದಿಷ್ಟು ಹೆಣ್ಣು ಮಕ್ಕಳಿಗೆ ಧೈರ್ಯ ಬರುವಂತಹ ವಿಷಯವಾದರೂ ಸಹ, ಇಲ್ಲಿಯವರೆಗೆ ಯೂಟ್ಯೂಬ್ ಮಾಧ್ಯಮಗಳಲ್ಲಿ ಈ ವಿಷಯ ಬಿತ್ತರಿಸಿದ್ದರೂ ಸಹ ಯಾವುದೇ ರೀತಿಯ ಸುಮೋಟೋ ಅಥವಾ ಕ್ರಿಮಿನಲ್ ಪ್ರಕರಣ ದಾಖಲಾಗದಿರುವುದು, ಶಾಸಕರ ಮಾತಿಗೆ ಕಿಂಚಿತ್ತು ಗೌರವವನ್ನು ಆಡಳಿತ ತೋರಿಸುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ವಿಚಾರವಾಗಿ ಬಿಇಒ ಮತ್ತು ಡಿಡಿ ರವರು ತಮ್ಮ ಗಮನಕ್ಕೆ ಬಂದರೂ, ಏನು ಮಾಡೋದೇ ಇರುವುದನ್ನು ನೋಡಿದರೆ ಭ್ರಷ್ಟಾಚಾರದ ಮೋಡ ಕಾಣಿಸುವಂತಹ ಸೂಚನೆ ಇರಬಹುದು ಎಂದು ಜನರಲ್ಲಿ ಮಾತಾಗಿದೆ.

ಹೆಣ್ಣು ಮಕ್ಕಳಿಗೆ ಪ್ರತ್ಯೇಕಿಸಿ ಸರ್ಕಾರಿ ಶಾಲೆಯನ್ನು ಕಲ್ಪಿಸಿಕೊಟ್ಟರು ಸಹ, ನಮ್ಮ ಹೆಮ್ಮೆಯ ಡಿ.ವಿ.ಜಿ. ರವರ ಹೆಸರಿನ ಧೈರ್ಯ ಇದ್ದರೂ ಸಹ, ನಮ್ಮ ಜನಪ್ರಿಯ ಶಾಸಕರ ಭರವಸೆ ಇದ್ದರೂ ಸಹ… ಎಲ್ಲವನ್ನು ಮೀರಿ ಹೆಣ್ಣು ಮಕ್ಕಳಿಗೆ ಕಲ್ಪಿಸಿ ಕೊಟ್ಟಿದ್ದ ಹೆಣ್ಣು ಮಕ್ಕಳ ಪ್ರತ್ಯೇಕ ಶಾಲೆಯಾಗಿದ್ದ ಡಿ.ವಿ.ಜಿ. ಶಾಲೆಯು, ಕೋ-ಎಜುಕೇಶನ್ ಗೆ ಬಂದಿರುವುದು ಆಘಾತಕಾರಿ ಒಂದು ಕಡೆಯಾದರೆ, ಅದನ್ನು ಮುಂದುವರಿಸಿ ಮಹಿಳಾ ಶಿಕ್ಷಕಿಯರ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣ ಇಡೀ ಮಹಿಳಾ ಸಮುದಾಯ ಹಾಗೂ ತಾಲೂಕು ತಲೆತಗ್ಗಿಸುವಂತೆ ಮಾಡಿರುವುದೇ ಅಲ್ಲದೆ, ಪ್ರಸಕ್ತ ಅಷ್ಟೊಂದು ಬಲಿಷ್ಠತೆಯಿಂದ ಚುನಾವಣೆಯನ್ನು ಮಾಡಿ ದೇವೇಗೌಡರಂತಹ ಹಿರಿಯ ನಾಯಕರನ್ನು ಮುಳಬಾಗಿಲಿಗೆ ಕರೆಸಿ, ಪ್ರಸಕ್ತ ಕುಮಾರಸ್ವಾಮಿ ಅಂತಹ ನಾಯಕರನ್ನು ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಕೂರಿಸಿ, ಮುಳಬಾಗಿಲು ತಾಲೂಕಿನಲ್ಲಿ ಗೆದ್ದಿರುವ ಜನಪ್ರಿಯ ಶಾಸಕರ ಅಸ್ತಿತ್ವಕ್ಕೆ ಈ ಪ್ರಕರಣ ಒಂದು ದೊಡ್ಡ ಸವಾಲಾಗಿದೆ. ಇದನ್ನು ಶಾಸಕರು ಹೇಗೆ ನಿಭಾಯಿಸುತ್ತಾರೆ ಮತ್ತು ನಡೆಸಿಕೊಳ್ಳುತ್ತಾರೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕಾಗಿದೆ.

ಇಷ್ಟೆಲ್ಲ ಪ್ರಕರಣಗಳು ಮತ್ತು ಹಗರಣಗಳನ್ನು ಮೀರಿ, ನಾಡು ನುಡಿ ಎಂಬ ವ್ಯಾಖ್ಯಾನದಲ್ಲಿ ನಮ್ಮ ಡಿ.ವಿ.ಜಿ. ಶಾಲೆಯು ಇದೆ ಹಾಗೂ ಕನ್ನಡಮ್ಮನ ಸೇವೆಗೈದ ಮಹೋನ್ನತರಾದ ಡಿ.ವಿ.ಜಿ. ಅವರ ನಮ್ಮ ಊರಿನಲ್ಲಿ ಈ ರೀತಿ ಆಗಿರುವುದು ಬಹಳ ಬೇಜಾರಿನ ಸಂಗತಿಯಾಗಿದೆ.

ಜೈ ಭುವನೇಶ್ವರಿ!

Leave a Reply

Your email address will not be published. Required fields are marked *