media BHARATH

Defining Ethical Journalism

ಶಾಸಕರು ಸಂಸದರು ತಹಸೀಲ್ದಾರ್ ರವರು ಹಾಗೂ ಜಿಲ್ಲಾಧಿಕಾರಿಗಳು ಮುಳಬಾಗಿಲು ನಗರಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಪ್ರವೇಶಿಸುವ ಮಾರ್ಗ ಸರಿ ಇದೆಯೇ ಎಂಬುದರ ಬಗ್ಗೆ ಗಮನ ಏಕೆ ಕೊಡುತ್ತಿಲ್ಲ?

ಪ್ರಜಾ ಸಾರ್ವಭೌಮರನ್ನು ಕಾಪಾಡಿಕೊಳ್ಳಬೇಕಾದ ಸಂವಿಧಾನದಲ್ಲಿನ ಕಾರ್ಯಾಂಗ ಶಾಸಕಾಂಗ ಮತ್ತು ನ್ಯಾಯಾಂಗದ ಉನ್ನತ ದರ್ಜೆಯ ಸೇವಕರು ಐಷಾರಾಮಿಯಾಗಿ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತು ವಾಹನದ ಕಿಟಕಿಗಳನ್ನು ಮುಚ್ಚಿಕೊಂಡು ಎಸಿ ಹಾಕಿಕೊಂಡರೆ! ಸುತ್ತಮುತ್ತಲಿನ ಜನರ ಸಮಸ್ಯೆ ಹೇಗೆ ಕಾಣುತ್ತದೆ…

ಮುಳಬಾಗಿಲಿನ ರಾಷ್ಟ್ರೀಯ ಹೆದ್ದಾರಿ ಮತ್ತು ನಗರಕ್ಕೆ ಬರುವ ಮುಖ್ಯದ್ವಾರದ ಹತ್ತಿರ ಇರುವ NHAI ಮಾಡಿರುವ ರಸ್ತೆಯ ಯೋಜನೆಯು ಬಹಳ ಸಂಶಯಾಸ್ಪದವಾಗಿದೆ …

ಇಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಗಳು ಹೆಚ್ಚಿದೆ ಎಂಬಂತೆ ಕಣ್ಣಿಗೆ ಕಾಣುವಂತಹ ನಿದರ್ಶನ ಇಲ್ಲಿ ನಾವು ನೋಡಬಹುದು-

ಇಲ್ಲಿರುವ ಚಿತ್ರದಲ್ಲಿ ಕಾಣುವಂತೆ ರಾಷ್ಟ್ರೀಯ ಹೆದ್ದಾರಿಗೆ ಸಮೀಪಿಸುವ ನಗರದಿಂದ ಹೊರ ಹೋಗುವ ವಾಹನಗಳಿಗಾಗಲಿ ಅಥವಾ ರಾಷ್ಟ್ರೀಯ ಹೆದ್ದಾರಿಯಿಂದ ನಗರಕ್ಕೆ ಧಾವಿಸುವ ವಾಹನಗಳಿಗಾಗಲಿ, ಕಣ್ಣಿಗೆ ಕಾಣುವಂತೆ ಬ್ಲಾಂಕ್ಸ್ ಸ್ಪಾಟ್ ಗಳು ರಾರಾಜಿಸುತ್ತಿದೆ , ಎಂತಹ ದಟ್ಟನಿಗೆ ಕಾಮಗಾರಿಯನ್ನು ಕೊಟ್ಟರು ಇಷ್ಟೊಂದು ಅವೈಜ್ಞಾನಿಕ ಹಾಗೂ ಆಪ್ರಯೋಗಿಕ ಯೋಜನೆಯನ್ನು ಮಾಡುತ್ತಿರಲಿಲ್ಲ. ಇಲ್ಲಿ ಈ ಪ್ರಶ್ನೆ ಉದ್ಭವಿಸಲು ಕಾರಣ ಏನೆಂದರೆ- , ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮಾನ್ಯವಾಗಿ ಚಲಿಸುವ ವಾಹನಗಳು ಸಹ ಇಲ್ಲಿ ಎಡಕ್ಕೆ ತಿರುಗಿ ಮುಳಬಾಗಿಲು ನಗರಕ್ಕೆ ಸಾಗಲು ಬಹಳಷ್ಟು ಭಯಾನಕ ಅಪಘಾತಗಳಿಗೆ ಅನುವು ಮಾಡಿಕೊಡುವಂತಹ ಸಾಧ್ಯತೆಗಳು ಹೆಚ್ಚು, ಏಕೆಂದರೆ ಇದೊಂದು ಕಣ್ಣಿಗೆ ಕಾಣದ ಎಡ ತಿರುವಾಗಿದೆ, ಅಷ್ಟೇ ಅಲ್ಲದೆ ವಾರಕ್ಕೊಂದು ಅಪಘಾತವು ಸಮೀಪದ ಠಾಣೆಗಳಲ್ಲಿನ ದಾಖಲಾದ ಪ್ರಕರಣಗಳಲ್ಲಿ ಕಾಣುತ್ತಿದೆ ಇಷ್ಟೇ ಅಲ್ಲದೆ ಅನೇಕ ಅಪಘಾತಗಳು ಠಾಣೆಯವರೆಗೂ ಬರುವುದಿಲ್ಲ, ಯಾವುದೋ ಒಂದು ಭ್ರಷ್ಟಾಚಾರದ ಆಳಕ್ಕೆ ಒಳಪಟ್ಟು ಇಲ್ಲಿನ ಯೋಜನಾಧಿಕಾರಿಗಳು ಬಹಳಷ್ಟು ಅವಶ್ಯಕತೆ ಕಾಣುವಂತೆ ಇದ್ದರೂ ಸಹ ಯಾವುದೇ ರೀತಿಯ ಸೇತುವೆಯನ್ನು ಎಲ್ಲಿ ಮಾಡಿರುವುದಿಲ್ಲ. ಈ ವೃತ್ತದಲ್ಲಿ ಬೆಂಗಳೂರಿನಿಂದ ನಗರಕ್ಕೆ ಬರುವ ವಾಹನಗಳ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು ಎಂಬುದರ ಜೊತೆಗೆ ನಗರದಿಂದ ಬೆಂಗಳೂರಿನ ಕಡೆಗೆ ರಾಷ್ಟ್ರೀಯ ಹೆದ್ದಾರಿಗೆ ತಲುಪಲು ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ರಸ್ತೆ ದಾಟುವ ಪರಿಸ್ಥಿತಿ ಸಾರ್ವಜನಿಕರಲ್ಲಿ ಪ್ರಸಕ್ತ ಅನಿವಾರ್ಯತೆಯು ಆಗಿದೆ, ಇಷ್ಟಕ್ಕೆ ಸಾಲದು ಎಂಬಂತೆ ತಿರುಪತಿ ಚೆನ್ನೈ ಕಡೆಯಿಂದ ಬರುವ ದೊಡ್ಡ ಪ್ರಮಾಣದ ವಾಹನಗಳು ಅಸಂಬದ್ಧವಾಗಿ ಅನಿವಾರ್ಯತೆಯಿಂದ ಇದೇ ವೃತ್ತದಲ್ಲಿ ಬಲಕ್ಕೆ ತಿರುಗಿ ಸಮೀಪದಲ್ಲಿರುವ ಜ್ಞಾನಜ್ಯೋತಿ ಶಾಲೆಯ ಮುಂದೆಯೇ ಅಪಾಯಕಾರಿಯಾಗಿ ಏಕಮುಖ ರಸ್ತೆಯಲ್ಲಿ ರಾಜಾರೋಷವಾಗಿ ಸಾಗುವುದು ಎಷ್ಟೋ ಬಾರಿ ಆಘಾತಕಾರಿ ಸರ್ವೇಸಾಮಾನ್ಯ ವಿಷಯವಾಗಿದೆ. ಇಲ್ಲಿಯೂ ಸಹ ಇದೇ ರೀತಿ ಬೆಂಗಳೂರಿನಿಂದ ಮುಳಬಾಗಿಲಿಗೆ ಬರುವ ವಾಹನಗಳು ಮುಖಾಮುಖಿಯಾಗಿ ಬಾರಿ ಗಾತ್ರದ ವಾಹನಗಳು ಅಸಂಬದ್ಧತೆಯಿಂದ ಏಕಮುಖ ರಸ್ತೆಯಲ್ಲಿ ಬರುವ ಆಘಾತವನ್ನು ಎದುರಿಸಬೇಕಾಗುತ್ತದೆ.

ಅಂದ ಹಾಗೆ ಇದೊಂದು ಯಾವುದೋ ಮೂಲೆಯಲ್ಲಿ ತವಾ ಯಾವುದು ಕಣ್ಣಿಗೆ ಕಾಣದಂತಹ ಪ್ರದೇಶದಲ್ಲಿನ ರಸ್ತೆ ಅಲ್ಲ, ಬದಲಿಗೆ ನಮ್ಮದೇ ತಾಲೂಕಿನ ಶಾಸಕರು ಜಿಲ್ಲೆಯ ಸಂಸದರು ಹಾಗೂ ನ್ಯಾಯಾಧೀಶರು ಸೇರಿದಂತೆ ಎಲ್ಲಾ ಜವಾಬ್ದಾರಿಯುತರು ಬಳಸುವ ದೈನಂದಿನ ರಸ್ತೆಯಾಗಿರುವುದು ವಿಪರ್ಯಾಸ.

ಇನ್ನು ಜನಸಾಮಾನ್ಯರಿಗೆ ಕಣ್ಣಿಗೆ ಕಂಡರು ಅನುಭವಕ್ಕೆ ಬಂದರೂ ಸಹ, ಇದೇ ರಸ್ತೆಯಲ್ಲಿ ನಗರಕ್ಕೆ ಧಾವಿಸುವ ಶಾಸಕರು, ತಾಲೂಕು ದಂಡಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಅನೇಕ ಜವಾಬ್ದಾರಿಯುತರು ಇದನ್ನು ಗಮನಿಸದೆ ಮೌನವಹಿಸಿರುವುದು ದುರಂತವೇ ಆಗಿದೆ.

ಸ್ಥಳೀಯರು ಹೇಳುವಂತೆ ಪ್ರಸಕ್ತ ಇರುವ ಪ್ರಜಾ ಸಾರ್ವಭೌಮರನ್ನು ಕಾಪಾಡಿಕೊಳ್ಳಬೇಕಾದ ಸಂವಿಧಾನದಲ್ಲಿನ ಕಾರ್ಯಾಂಗ ಶಾಸಕಾಂಗ ಮತ್ತು ನ್ಯಾಯಾಂಗದ ಉನ್ನತ ದರ್ಜೆಯ ಸೇವಕರು ಐಷಾರಾಮಿಯಾಗಿ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತು ವಾಹನದ ಕಿಟಕಿಗಳನ್ನು ಮುಚ್ಚಿಕೊಂಡು ಎಸಿ ಹಾಕಿಕೊಂಡರೆ! ಸುತ್ತಮುತ್ತಲಿನ ಜನರ ಸಮಸ್ಯೆ ಹೇಗೆ ಕಾಣುತ್ತದೆ ಹಾಗೂ ಸಾರ್ವಜನಿಕರ ಕನಿಷ್ಠ ಇರುವಿಕೆಗೆ ಬೇಕಾದ ರಸ್ತೆಯೇ ಸಾರ್ವಜನಿಕರ ಜೀವ ಭಯಕ್ಕೆ ಕಾರಣವಾದರೆ, ಇನ್ನು ಸಾಮಾನ್ಯ ಜನರನ್ನು ಕಾಪಾಡುವವರು ಯಾರು ಎಂಬ ಮಾತು ಹರಡುವುದೇ ಅಲ್ಲದೆ, ಸಂವಿಧಾನದ ಮೇಲಿನ ನಂಬಿಕೆಯನ್ನು ಉಳಿಸುವ ಅಥವಾ ಅಳಿಸುವ ಜವಾಬ್ದಾರಿ ಕಾರ್ಯಾಂಗ ಮತ್ತು ಶಾಸಕಾಂಗಕ್ಕೆ ಇದೆಯೋ ಇಲ್ಲವೋ ಎಂಬ ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *