ಸಂಸದರೇ ಜಾಗೃತರಾಗಿ! ಅಂಗನವಾಡಿ ಕಾರ್ಯಕರ್ತರ ಅಳಲುಗಳನ್ನು ಕೇಳುವವರು ಯಾರು ?
ಭಾರತದ ಸಂವಿಧಾನದಲ್ಲಿ ಪ್ರಜಾಸೇವಕರಾಗಿ ಪ್ರಜಾ ಪ್ರತಿನಿಧಿಯಾಗಿ ತಮ್ಮ ಕಾರ್ಯನಿರ್ವಹಿಸಬೇಕಿರುವ ಶಾಸಕರು ಮತ್ತು ಸಂಸದರು ಎಷ್ಟರಮಟ್ಟಿಗೆ ನೀತಿಯ ಮತ್ತು ಧರ್ಮದ ಜವಾಬ್ದಾರಿಯನ್ನು ವಹಿಸುತ್ತಿದ್ದಾರೆ ಎಂದು ಒಮ್ಮೆ ವಿಮರ್ಶೆ ಮಾಡಲೇಬೇಕು. ಈ ವಿಷಯ ಏಕೆ ಮುಖ್ಯ ಎಂದರೆ ಮೊದಲು ಒಂದು ಪ್ರಶ್ನೆಗೆ ಶಾಸಕರು ಸಂಸದರು ಉತ್ತರ ಕೊಡಲೇಬೇಕು, ಅದು ಏನೆಂದರೆ! ಪ್ರಸಕ್ತ ಶಾಸಕರು ಸಂಸದರಿಗೆ ಮಾಸಾಶನವು ಅಂದರೆ ತಿಂಗಳಿಗೆ ಸಂಬಳವು ಸರಿಯಾಗಿ ಬರುತ್ತಿರುವುದೇ ಎಂದು ಹೇಳಬೇಕು. ನಮ್ಮ ಮಾಹಿತಿಯ ಪ್ರಕಾರ ಹೇಳುವುದಾದರೆ ಸರಿ ಸಮಯಕ್ಕೆ ಇವರ ಸಂಬಳಗಳು ಬರುತ್ತಿದೆ.
ಮೊದಲನೆಯದಾಗಿ ಪ್ರಜಾ ಸೇವೆಗೆ ಎಂದು ಬರುವ ಪ್ರಜಾಪ್ರತಿನಿಧಿಗಳು ಸಂಬಳ ತೆಗೆದುಕೊಳ್ಳುವುದು ಬೇಡವೋ ಎಂಬ ದ್ವಂದ್ವ ಹಿಂದಿನಿಂದಲೂ ಇದೆ. ಆದರೆ ಪ್ರಸಕ್ತ ಇಲ್ಲಿನ ಸಮಸ್ಯೆ ಬೇರೆಯೇ ಇದೆ, ಅದೇನೆಂದರೆ, ಅಂಗನವಾಡಿ ಕಾರ್ಯಕರ್ತರು ತಮ್ಮ ಕರ್ತವ್ಯ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ಒಂದು ರೀತಿಯಲ್ಲಿ ಹಲವಾರು ಗ್ರಾಮೀಣ ಮತ್ತು ತಳಮಟ್ಟದ ಪ್ರಜಾ ವ್ಯವಸ್ಥೆಯ ಅನೇಕ ಅನುಕೂಲತೆಗಳನ್ನು ನೀಡುತ್ತಿದೆ. ಅವರಿಗೆ ಸದ್ಯ ಪರಿಸ್ಥಿತಿಯಲ್ಲಿ ಸರ್ಕಾರಿ ಅಥವಾ ಸರ್ಕಾರೆತರ ಎಂದು ತೀರ್ಮಾನಿಸಲು ಇನ್ನೂ ಸಮಯ ಪಡೆದರು ಪರವಾಗಿಲ್ಲ, ಆದರೆ ಅನೇಕ ಕಡೆಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಸರಿಯಾದ ರೀತಿಯಲ್ಲಿ ತಿಂಗಳಿಗೆ ಸಂಬಳಗಳು ದೊರಕುತ್ತಿಲ್ಲ ಹಾಗೂ ಇದೊಂದು ಸಾಮಾನ್ಯ ವಿಷಯವಾಗಿ ಕಡೆಗಣಿಸಲ್ಪಟ್ಟಿದೆ ಎಂದರೆ ತಪ್ಪೇನಿಲ್ಲ.
ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನ ಶಾಸಕರು ತಳಮಟ್ಟದಲ್ಲಿ ಕೆಲಸ ಮಾಡುವ ಎಲ್ಲಾ ಸೇವಕರು ಅಂದರೆ ಅವರು ಕಾರ್ಯಾಂಗ ದಡಿಯಲ್ಲಿ ಯಾವುದೇ ದರ್ಜೆಯಲ್ಲಿ ಬರಲಿ, ಮೊದಲಿಗೆ ತಳಮಟ್ಟದಲ್ಲಿನ ಸೇವೆಯಲ್ಲಿರುವ ಹೆಚ್ಚಿನ ಹೆಣ್ಣು ಮಕ್ಕಳೇ ಆಗಿರುವ ಅಂಗನವಾಡಿ ಕಾರ್ಯಕರ್ತೆಯ ಬಗ್ಗೆ ಕಾಳಜಿ ವಹಿಸಲೇಬೇಕು ಹಾಗೂ ಇದನ್ನು ಮಾಡದೆ ಅನ್ಯ ಯಾವುದು ವಿಚಾರಧಾರೆಗಳನ್ನು ತಿಳಿಸಿಕೊಡುವುದರಿಂದ ಮಹಿಳೆಯರ ಸಬಲೀಕರಣ ಎಂಬ ಅನೇಕ ವಿಚಾರಗಳಲ್ಲಿ ಪ್ರಮುಖವಾಗಿ ಇದನ್ನು ಗಮನಿಸಬೇಕೆ ಹೊರತು ಕಡೆಗಣಿಸಬಾರದು. ಇಷ್ಟನ್ನು ಮಾಡದಿದ್ದರೆ ಶಾಸಕರು, ಶಾಸಕರು ಎಂದು ಕರೆಸಿಕೊಳ್ಳಲು ಹಾಗೂ ಸಂಸದರು, ಸಂಸದರು ಎಂದು ಹೇಳಿಕೊಳ್ಳಲು ಯಾವ ರೀತಿಯ ನೈತಿಕತೆ ಇರುತ್ತದೆ ಎಂದು ವಿಮರ್ಶೆ ಮಾಡಿಕೊಳ್ಳಬೇಕು.
ಮೊದಲು ನಿಮಗಾಗಿ ನಿಮ್ಮ ಪರವಾಗಿ ದುಡಿಯುತ್ತಿರುವ ಜನರ ಕಷ್ಟ ಆಕ್ರಂದನಗಳನ್ನು ವಿಚಾರಿಸಿ, ಅದರಲ್ಲೂ ತಳಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಹಳಷ್ಟು ಗ್ರಾಮೀಣತೆಯ ಉನ್ನತಿಗಾಗಿ ದುಡಿಯುತ್ತಿದ್ದಾರೆ ಮತ್ತು ಈ ತಾಯಂದಿರ ವಿಚಾರವಾಗಿ ಹೆಚ್ಚಿನ ಗಮನಕೊಟ್ಟರೆ ಶಾಸಕಾಂಗಕ್ಕೂ ಒಂದು ಮರ್ಯಾದೆ ಹೆಚ್ಚುತ್ತದೆ ಎಂಬುದು ನನ್ನ ಅಭಿಪ್ರಾಯ. ದಯಮಾಡಿ ನಮ್ಮ ತಾಲೂಕು ಹಾಗೂ ಎಲ್ಲ ತಾಲೂಕು ಪೂರ್ಣ ರಾಜ್ಯದಲ್ಲೆಡೆ ಅಂಗನವಾಡಿ ಕಾರ್ಯಕರ್ತೆಯರ ವಿಚಾರವಾಗಿ ಸರಿಯಾದ ಸಮಯಕ್ಕೆ ಮಾಸಾಶನ ಅಥವಾ ಸಂಬಳಗಳನ್ನು ಹಾಗೂ ಅವರ ಕರ್ತವ್ಯಕ್ಕೆ ತಕ್ಕಂತಹ ಗಮನಿಕೆಯನ್ನು ನೀಡಬೇಕು ಎಂದು ಮನವಿ ಮಾಡುತ್ತಾ ಇಂತಹ ವಿಷಯಗಳನ್ನು ಎಲ್ಲಾ ಕ್ಷೇತ್ರಗಳಲ್ಲಿನ ನಾಯಕರು ಎಂದು ಸಂಕಲ್ಪಿಸುವ ಪ್ರತಿಯೊಬ್ಬರು ವಿಮರ್ಶಿಸಬೇಕು ಎಂದು ನಮ್ಮ ಪ್ರಯತ್ನ.
Leave a Reply