ಹವಾಮಾನ ಬದಲಾವಣೆಯ ಜಾಗೃತಿ ಹಾಗೂ ಪ್ರಸಕ್ತ ಹವಾಮಾನ ಬದಲಾವಣೆಯ ವಿಚಾರವಾಗಿ ಯುವ ಸಮೂಹದ ಪಾಲ್ಗೊಳ್ಳುವಿಕೆ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆಯ ಬಗ್ಗೆ ಏನು ಮಾಡಬಹುದು ಎಂಬೆಲ್ಲ ವಿಚಾರದ ಜಾಗೃತಿ ಜಾತ ಹಾಗೂ ಪರಿಸರ ಕಾಳಜಿಯುತ್ತ ಚಟುವಟಿಕೆಗಳಿಗೆ ಇಂದು ದಿನಾಂಕ 06-09-2024 ನಮ್ಮ, ಮುಳಬಾಗಿಲು ತಾಲೂಕು ನಾಗರಿಕರ ವೇದಿಕೆ ಹಾಗೂ ಕೃಷಿ ಮಿತ್ರ ಪ್ರತಿಷ್ಠಾನ ಸಂಯೋಜನೆಯಲ್ಲಿ ಚಾಲನೆಗೊಂಡಿತು.
ಹವಾಮಾನ ಬದಲಾವಣೆಯ ಜಾಗೃತಿ ಹಾಗೂ ಪ್ರಸಕ್ತ ಹವಾಮಾನ ಬದಲಾವಣೆಯ ವಿಚಾರವಾಗಿ ಯುವ ಸಮೂಹದ ಪಾಲ್ಗೊಳ್ಳುವಿಕೆ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆಯ ಬಗ್ಗೆ ಏನು ಮಾಡಬಹುದು ಎಂಬೆಲ್ಲ ವಿಚಾರದ ಜಾಗೃತಿ ಜಾತ ಹಾಗೂ ಪರಿಸರ ಕಾಳಜಿಯುತ್ತ ಚಟುವಟಿಕೆಗಳಿಗೆ ಇಂದು ದಿನಾಂಕ 06-09-2024 ನಮ್ಮ, ಮುಳಬಾಗಿಲು ತಾಲೂಕು ನಾಗರಿಕರ ವೇದಿಕೆ ಹಾಗೂ ಕೃಷಿ ಮಿತ್ರ ಪ್ರತಿಷ್ಠಾನ ಸಂಯೋಜನೆಯಲ್ಲಿ ಚಾಲನೆಗೊಂಡಿತು.
ಮತ್ತಷ್ಟು ವಿಷಯಗಳನ್ನು ವಿಮರ್ಷಿಸುವ ಹಾಗೂ ಹವಾಮಾನ ಬದಲಾವಣೆ ಬಗ್ಗೆ ಕಾಳಜಿ ವಹಿಸುವ ಚಟುವಟಿಕೆಗಳನ್ನು ಮಾಡುವ ಪಣತೊಡಲಾಯಿತು. ಹವಾಮಾನ ಬದಲಾವಣೆಯ ವಿಷಯವಾಗಿನ ಈ ಚಟುವಟಿಕೆಯ ಚಾಲನೆಯ ನಂತರ ಮುಳಬಾಗಿಲು ನಾಗರೀಕರ ವೇದಿಕೆಯ ಹಾಗೂ ಕೃಷಿ ಮಿತ್ರ ಪ್ರತಿಷ್ಠಾನ ಸಂಯೋಜನೆಯಲ್ಲಿ ಹವಾಮಾನ ಬದಲಾವಣೆಯನ್ನು ತಡೆಯಲು ಏನು ಮಾಡಬಹುದು ಎಂಬ ಹಲವಾರು ವಿಷಯಗಳ ವಿಮರ್ಶೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರೀಕರ ವೇದಿಕೆಯ ಅಧ್ಯಕ್ಷರಾದ Rtn. ರೋಹನ್ ಗೌಡರವರು ಮರಗಳು, ಕಾರ್ಬನ್ ಡೈಯಾಕ್ಸೈಡ್ ಶೋಷಿಸಿ ಗಾಳಿ ಶುದ್ಧಗೊಳಿಸುತ್ತವೆ ಹಾಗೂ ಮರಗಳನ್ನು ನಡೆಸುವುದರ ವಿಚಾರವಾಗಿ ಅತಿ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು, ಪ್ಲಾಸ್ಟಿಕ್, ಕಾಗದ, ಲೋಹ ಇತ್ಯಾದಿಗಳನ್ನು ಪುನರ್ವಿನಿಯೋಗ ಮಾಡುವ ಅಭ್ಯಾಸಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ನಂತರ ಮಾತನಾಡಿದ ನಾಗರಿಕರ ವೇದಿಕೆಯ ಉಪಾಧ್ಯಕ್ಷರಾದ ಎನ್. ಎಂ. ಧನಂಜಯ್ ರವರು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವುದು, ಎಲ್ಇಡಿ ಬಲ್ಬ್ ಗಳನ್ನು ಬಳಸುವುದು ಹಾಗೂ ಅವಶ್ಯಕತೆಗೆ ಮೀರಿದ ವಿದ್ಯುತ್ ಶಕ್ತಿಯನ್ನು ವ್ಯಯ ಮಾಡದೆ ಉಳಿತಾಯ ಮಾಡಬೇಕು ಎಂದು ಹೇಳಿದರು, ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಶ್ರೀ ವಿಜಯಲಕ್ಷ್ಮಿ ಬೋರ್ವೆಲ್ ಮಾಲೀಕರು ಆದ ಜಯರಾಮೇಗೌಡ ರವರು ಮಾತನಾಡಿ ವೈಯಕ್ತಿಕವಾಗಿ ಹೆಚ್ಚು ಬಳಕೆಯಾಗುತ್ತಿರುವ ವಾಹನಗಳು ಕಡಿಮೆ ಮಾಡಬೇಕು ಹಾಗೂ ಹೆಚ್ಚಿನ ರೀತಿಯಲ್ಲಿ ಸೈಕಲ್ ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸುವುದನ್ನು ಜನರು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು, ಇದೇ ಸಂದರ್ಭದಲ್ಲಿ ಮಾತನಾಡಿದ ನಾಗರಿಕರ ವೇದಿಕೆಯ ನಗರ ಸಂಯೋಜಕರಾದ ಎಂ. ಜಬಿವುಲ್ಲಾ (ಅಧ್ಯಕ್ಷರು ರೋಷನ್ ಎಜುಕೇಶನ್ ಅಂಡ್ ಹೆಲ್ತ್ ಕೇರ್) ರವರು ಜಲ ಸಂರಕ್ಷಣೆಯನ್ನು ಮಾಡಬೇಕು ಹಾಗೂ ನೀರನ್ನು ವ್ಯರ್ಥ ಮಾಡದೆ ಸಂರಕ್ಷಿಸಬೇಕು, ಪ್ರತಿ ಮನೆಗೊಂದು ಮರವನ್ನು ಬೆಳೆಸಬೇಕು ಎಂದು ಹೇಳಿದರು.
ಇದಾದ ನಂತರ ಕಾರ್ಯಕ್ರಮವನ್ನು ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರಿಗೆ ತಲುಪುವಂತೆ ಮಾಡಲು ನಾವು ತಾಲೂಕಿನಲ್ಲಿ ಹೆಚ್ಚು ಜಾಗೃತಿ ಅಭಿಯಾನಗಳನ್ನು ಮತ್ತು ನಗರದಲ್ಲಿ ಜಾಗೃತಿ ಜಾತವನ್ನು ನಡೆಸಿಕೊಂಡು ಹೋಗಬೇಕು ಎಂದು ಕಾರ್ಯದರ್ಶಿ ಬಿ. ಎಂ. ರಮೇಶ್ ರವರು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ನಾಗರೀಕರ ವೇದಿಕೆಯ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡರು.
ಇದೇ ರೀತಿಯ ಕಾರ್ಯಕ್ರಮಗಳು ನಗರದಾದ್ಯಂತ ಹವಾಮಾನ ಬದಲಾವಣೆಯ ವಿಚಾರವನ್ನು ಎಲ್ಲರಿಗೂ ಮುಟ್ಟಿಸುವವರೆಗೂ ನಮ್ಮ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡು ನಡೆಯುತ್ತದೆ ಎಂದು ಎಂ. ಕುಮಾರಸ್ವಾಮಿ ಕಚೇರಿಧಾರಕರು ನಾಗರೀಕರ ವೇದಿಕೆ ಹಾಗೂ ನಗರದ ಬಿಜಿಎಸ್ ಕರಾಟೆ ಅಸೋಸಿಯೇಷನ್ ಮಿಟ್ಟೂರು ನಾಗೇಶ್ ರವರು ಸಂಕಲ್ಪಿಸಿ ಹೇಳಿದರು . ಕಾರ್ಯಕ್ರಮದಲ್ಲಿ ಸುವರ್ಣ ಹಳ್ಳಿಯ ಯುವಕರಾದ ಲಿಖಿತ್ ಹಾಗೂ ಅವರ ತಂಡ ಪಾಲ್ಗೊಂಡಿದ್ದರು.
Leave a Reply