media BHARATH

Defining Ethical Journalism

ಚನ್ನಪಟ್ಟಣದ ಜವಾಬ್ದಾರಿಯುತ ನಾಗರಿಕರು ಯೋಚಿಸಲೇಬೇಕಾದ ಅಂಶಗಳು?

ಇಂದಿನ ನಿಮ್ಮ ಮುಂದಾಲೋಚನೆಯ ನಡೆ… ದೇಶದ ರಾಜಕೀಯ ವ್ಯವಸ್ಥೆಯ ಆಲೋಚನೆಯನ್ನು ಬದಲಾಯಿಸಬೇಕು. ಯಾರೇ ಆಗಲಿ ಚುನಾವಣೆ ನಿಲ್ಲಲು ಅರ್ಹತೆ ಎಂದರೆ ಹಣ ಇದ್ದರೆ ಸಾಕು ಎಂಬ ಆಲೋಚನೆ ಕೊನೆಗೊಳ್ಳಬೇಕು !

  • ನಿಮ್ಮ ಚನ್ನಪಟ್ಟಣ ತಾಲೂಕಿನ ರಾಷ್ಟ್ರೀಯ ಅಥವಾ ಸ್ಥಳೀಯ ಪಕ್ಷಗಳು ಚನ್ನಪಟ್ಟಣ ತಾಲೂಕಿನ ಜವಾಬ್ದಾರಿಯುತ ನಾಯಕರ ಅಥವಾ ಅದೇ ಪಕ್ಷದ ಜವಾಬ್ದಾರಿಯುತ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ರಾಜಕೀಯ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದಾರೆಯೇ?
  • ಈ ಹಿಂದೆಚನ್ನಪಟ್ಟಣದಿಂದ ಚುನಾಯಿತರಾದಜನಪ್ರಿಯ ನಾಯಕರು ಕುಮಾರಣ್ಣನವರುಜನಾಭಿಪ್ರಾಯವನ್ನು ಸಂಗ್ರಹಿಸಿ ಎಷ್ಟು ಬಾರಿ ಸಾರ್ವಜನಿಕ ಆಹವಾಲುಗಳನ್ನು ಸ್ವೀಕರಿಸಿ ಗೆದ್ದ ನಂತರ ತಮ್ಮ ಜವಾಬ್ದಾರಿ ನಿಭಾಯಿಸಿರುತ್ತಾರೆ?
  • ಕಾರ್ಯಕರ್ತರು ತಮಗೊಬ್ಬಮಾಜಿ ಮುಖ್ಯಮಂತ್ರಿ ಹಾಗೂ ಒಳ್ಳೆಯ ನಾಯಕ ನಾವು ಚುನಾಯಿತರನ್ನಾಗಿ ಮಾಡಿದರೆ ನಮಗೆಸಿಗುತ್ತಾರೆ ಹಾಗೂ ಹೆಚ್ಚಿನ ಕಾಮಗಾರಿಗಳು ನಡೆಯುತ್ತವೆ ಎಂಬ ಭರವಸೆಯನ್ನುಉಳಿಸಿಕೊಳ್ಳುವಲ್ಲಿಯಶಸ್ವಿಯಾಗಿದ್ದಾರೆಯೇ?
  • ಚನ್ನಪಟ್ಟಣ ತಾಲೂಕಿನಲ್ಲಿ ಏಕೆಚುನಾವಣೆಗೆ ಸ್ಪರ್ಧಿಸುವಅಭ್ಯರ್ಥಿಗಳು ಸ್ಥಳೀಯತೆಯಲ್ಲಿ ಇರಬಾರದು?
  • ಇಷ್ಟು ವರ್ಷ ಬಲಿಷ್ಠ ಬುನಾದಿಯನ್ನು ಹೊಂದಿದ್ದ ಜೆಡಿಎಸ್ ಪಕ್ಷದಿಂದ, ಏಕೆ ಸ್ಥಳೀಯ ಕಾರ್ಯಕರ್ತರಿಗೆಅವಕಾಶ ನೀಡಲಿಲ್ಲ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನೇ ಚನ್ನಪಟ್ಟಣದ ಸ್ಥಳೀಯ ಕಾರ್ಯಕರ್ತರಲ್ಲಿರುವ ನಾಯಕರಿಗಿಂತಸಮರ್ಥರು ಎಂದು ಏಕೆ ಪರಿಗಣಿಸಬೇಕು?
  • ಚೆನ್ನಪಟ್ಟಣದ ಅಭ್ಯರ್ಥಿಯಾಗಲು ಒಬ್ಬಚನ್ನಪಟ್ಟಣದ ಯಾವುದೇ ಪಕ್ಷದ ಕಾರ್ಯಕರ್ತನಿಗೆ ಇರಬೇಕಾದ ಲಕ್ಷಣಗಳು ಏನು?
  • ಈ ಬಾರಿಯಚನ್ನಪಟ್ಟಣ ಚುನಾವಣೆ ಹೇಗೋ ಹಾಗೆ ಪಕ್ಷಗಳು ಎದುರಿಸಲೇಬೇಕು !ಆದರೆ ಜನ ಇದನ್ನು ಹೇಗೆ ಎದುರಿಸಬೇಕು ಎಂದುಅರಿಯೋಣ…?
  • ನಿಮ್ಮ ಚನ್ನಪಟ್ಟಣ ತಾಲೂಕಿನ ರಾಷ್ಟ್ರೀಯ ಅಥವಾ ಸ್ಥಳೀಯ ಪಕ್ಷಗಳು ಚನ್ನಪಟ್ಟಣ ತಾಲೂಕಿನ ಜವಾಬ್ದಾರಿಯುತ ನಾಯಕರ ಅಥವಾ ಅದೇ ಪಕ್ಷದ ಜವಾಬ್ದಾರಿಯುತ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ರಾಜಕೀಯ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದಾರೆಯೇ?
  • ಅನಿರೀಕ್ಷಿತವಾಗಿ ಸಾವು ನೋವುಗಳಾದಾಗ ಮರುಚುನಾವಣೆ ಆಗೋದು ಸಹಜ, ಆದರೆ ಒಮ್ಮೆ ಒಂದು ಬಾರಿ ಗೆದ್ದುನಂತರ ಮತ್ತೊಂದು ಪದವಿಗೆ ವ್ಯಾಮೋಹಿಸಿ ಜನಸಾಮಾನ್ಯರ ತೆರಿಗೆ ಹಣವನ್ನು ಪೋಲು ಮಾಡುವುದಲ್ಲದೆ ಮತ ಚಲಾವಣೆ ಮಾಡಿದ ನಾಗರಿಕರ ನಂಬಿಕೆಯನ್ನುಹುಸಿ ಮಾಡುವುದು ಎಷ್ಟು ಸರಿ?
  • ನಿಖಿಲ್ ಕುಮಾರಸ್ವಾಮಿ ಅವರುಚನ್ನಪಟ್ಟಣದ ಸ್ಥಳೀಯ ಪಕ್ಷಕ್ಕೆದುಡಿದಿರುವ ಹಿರಿಯರಿಗೆ ಅವಕಾಶ ಕಲ್ಪಿಸಿದ್ದರೆ ಅಥವಾ ಯುವಕರಿಗೆ ಅವಕಾಶ ಕಲ್ಪಿಸಿದ್ದರೆ ಬಹಳ ಮೆಚ್ಚುಗೆಯ ವಿಷಯವಾಗುತ್ತಿತ್ತು, ಒಂದು ವೇಳೆ ನಿಖಿಲ್ ಕುಮಾರಸ್ವಾಮಿಯವರು ಗೆದ್ದ ನಂತರ ಅವರ ತಾತನವರ ಮಾತಿನಂತೆ ಪಕ್ಷ ಕಟ್ಟಲು ಯುವ ನಾಯಕರಂತೆ ರಾಜ್ಯವಾರು ಪ್ರವಾಸ ಕೈಗೊಂಡರೆ… ಚನ್ನಪಟ್ಟಣದಪ್ರಜೆಗಳ ಗತಿಯೇನು?
  • ಇದನ್ನು ಮುಂದುವರೆಸುತ್ತಾ ಹೋದರೆ ಅನೇಕ ತಪ್ಪುಗಳನ್ನು ಹಿಡಿಯುವುದು ಏಕ ಪಕ್ಷಿಯ ವಿಮರ್ಶೆಯಾಗುತ್ತದೆ. ಅಲ್ಲವೇ?
  • ಇನ್ನು ಕಾಂಗ್ರೆಸ್ ನ ವಿಷಯಕ್ಕೆ ಬರುವುದಾದರೆ ಡಿಕೆ ಸುರೇಶ್ ರವರ ಹೆಸರು ಬಂದರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ಸಿಗೆ ಬಂದಿರುವ ಸಿ. ಪಿ. ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಿರುವುದು ರಾಜಕೀಯ ತಂತ್ರಗಾರಿಕೆ ಅಷ್ಟೇ… ಕಾಂಗ್ರೆಸ್ನವರು ಸಹ ಪಕ್ಷಕ್ಕಾಗಿ ದುಡಿದಿರುವ ಒಳ್ಳೆಯ ವ್ಯಕ್ತಿಗೆ ಟಿಕೆಟ್ ಕೊಡಬಹುದಿತ್ತು ಅಲ್ಲವೇ?
  • ಇನ್ನು ಜೆಡಿಎಸ್ ಕುಮಾರಸ್ವಾಮಿಯವರು ಕುಟುಂಬ ರಾಜಕಾರಣ ಮಾಡುವುದು ಎಷ್ಟು ಸರಿ ಎಷ್ಟು ತಪ್ಪು ಎಂದು ಅವರ ಕುಟುಂಬವೇ ವಿಮರ್ಶೆ ಮಾಡಿಕೊಳ್ಳಬೇಕು! ಅಂತೆಯೇ… ಸಿಪಿ ಯೋಗೇಶ್ವರ್ ರವರು ಸಹ ಇಷ್ಟು ಬಾರಿ ನಾನು ಗೆದ್ದೆ ಅಷ್ಟು ಬಾರಿ ಗೆದ್ದೆ ಎಂದು ಹೇಳುವ ಬದಲು, ಸ್ಥಳೀಯ ಕಾರ್ಯಕರ್ತರು ಇಷ್ಟೆಲ್ಲಾ ಅವರಿಗೆ ಗೆಲ್ಲಲು ಅವಕಾಶ ಮಾಡಿಕೊಟ್ಟಾಗ ಎಷ್ಟು ಜನಯುವಕರನ್ನು ಅಥವಾ ಜೊತೆಗೆ ಕೆಲಸ ಮಾಡಿದ ನಾಯಕರನ್ನು ಅವರುಬೆಳೆಸಿದ್ದಾರೆ ಅಥವಾ ಏಕೆಪ್ರಭುದ್ಧ ಕಾರ್ಯಕರ್ತರು ತಮ್ಮ ಕುಟುಂಬವನ್ನು ಬಿಟ್ಟು ನಾಯಕರನ್ನು ನಂಬಿದಾಗ ಒಮ್ಮೆ ಅವರಿಗೂ ಟಿಕೆಟ್ ಕೊಟ್ಟುಎಂಎಲ್ಎ ಅಥವಾ ಎಂಪಿ ಮಾಡಬಾರದು?

ಯಾರಾದರೂ ಸ್ಥಳೀಯ ಪಕ್ಷೇತರರು ಸಮರ್ಥ ಅಭ್ಯರ್ಥಿಯಾಗಿ ಇದ್ದ ಪಕ್ಷದಲ್ಲಿ ಅವರಿಗೆ ಬೆಂಬಲಿಸುವುದು ಸೂಕ್ತ ಅಥವಾ ರಾಷ್ಟ್ರೀಯಮತ್ತು ಸ್ಥಳೀಯ ಪಕ್ಷಗಳಲ್ಲಿ ನಮ್ಮದೇ ತಾಲೂಕಿನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಟಿಕೆಟ್ ಅವಕಾಶ ಕೊಟ್ಟರೆ ಅವರನ್ನು ಬೆಂಬಲಿಸುವುದು ಸೂಕ್ತ ಅಥವಾ ನಮ್ಮ ತಾಲೂಕಿನನಾಯಕತ್ವದ ಪ್ರಶ್ನೆ ಬಂದಾಗ ಇಲ್ಲಿರುವ ಜನರಿಗೆ ನಾಯಕತ್ವದ ಲಕ್ಷಣವೇ ಇಲ್ಲ ಹಾಗೂ ಇಲ್ಲಿರುವ ಜನರು ಬರಿ ದುಡ್ಡಿಗಷ್ಟೇ ಸೀಮಿತರು ಬುದ್ಧಿ ಹೀನರು ಎಂಬ ಸಂದರ್ಭವ ಒದಗಿದಾಗ ವಿಧಿ ಇಲ್ಲದೆ ಭಾರತ ದೇಶದ 145 ಕೋಟಿ ಜನಸಂಖ್ಯೆಯಲ್ಲಿ ಯಾರಾದರೂ ಬಂದು ಚುನಾವಣೆ ನಿಂತರೆ ಅಂಥವರನ್ನು ಬೆಂಬಲಿಸುವುದು ಅನಿವಾರ್ಯ… ಇದು ನಮ್ಮ ವಿಮರ್ಶೆ, ಇದು ಏಕೆ ಬಂದಿದೆ ಎಂದರೆ ನಾವು ಇರುವ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ಯಥೇಚ್ಛವಾಗಿ ಹಣ ಹೆಂಡವನ್ನು ಹಂಚಿ, ಅತಿಯಾದ ಹೆಚ್ಚಿನ ಜನರನ್ನು ದುಡಿಯುತ್ತಿದ್ದ ಅನೇಕ ರೈತರನ್ನು ಮೈಗಳ್ಳರನ್ನಾಗಿ ಮಾಡಿ ಯಾವುದೇ ರೀತಿಯಅಭಿವೃದ್ಧಿ ಇಲ್ಲದೆ ಬರಿಯ ಒಣ ರಾಜಕೀಯ ಮೆರೆಯುತ್ತಿರಲು ಕಾರಣ! ಈ ಮೇಲ್ಕಂಡ ಎಲ್ಲಾ ಪ್ರಶ್ನೆಗಳನ್ನು ನಾವು ವಿಮರ್ಶೆ ಮಾಡಲಿಲ್ಲ ಎಂಬುದು ಸುಳ್ಳಲ್ಲ. ನಮ್ಮ ತಾಲೂಕಿನ ರೆವೆನ್ಯೂ ಇಲಾಖೆಯ ಅತಿ ಭ್ರಷ್ಟ ನಿರ್ವಹಣೆಯೋ ಇದಕ್ಕೊಂದು ಉದಾಹರಣೆ, . ಈ ಉದ್ಯಮಿಗಳು ರಿಯಲ್ ಎಸ್ಟೇಟ್ ಮಾಡಿ ಬಿಸಿನೆಸ್ ಮಾಡಿಕೊಳ್ಳುತ್ತಾರೆ ಹೊರತು, ರೈತರ ಸಮಸ್ಯೆ ಹರಿತು ತಾಲೂಕಿನ ನಾಗರಿಕರ ಹಿತಕ್ಕಾಗಿ ನಮ್ಮ ಕೈಗೆ ಸಿಗುವುದಿಲ್ಲ, ಸತ್ಯ! ನಮ್ಮ ತಾಲೂಕಿನ ರವಿನ್ಯೂ ಅಧಿಕಾರಿಗಳ ಕೆಲವರ ಆಸ್ತಿ ವಿವರಣೆ ಕೇಳಿದರೆ ರಾಜ್ಯವೇ ಬೆಚ್ಚಿ ಬೀಳುತ್ತದೆ- ಕನಿಷ್ಠ ವೆಂದರು ಒಂದು ಸಾವಿರದಿಂದ – ಒಂದು ಸಾವಿರದ ಐದುನೂರು ಕೋಟಿ ಕೇವಲ ವರ್ಷಗಳಲ್ಲಿ ಸಂಪಾದನೆ ಮಾಡಿರುತ್ತಾರೆ… ಇದಕ್ಕೆ ಕಾರಣ ಲೂಟಿಕೋರ ಎಂಎಲ್ಎಗಳು ಈ ಹಿಂದೆಯಿಂದಲೂ ಅಂತಹವರೆ ಇದ್ದರು ಹಾಗೂ ಮೀಸಲಾತಿ ಇದ್ದರೂ ಸ್ಥಳೀಯ ಮೀಸಲಾತಿ ವ್ಯಾಪ್ತಿಯ ನಾಯಕತ್ವಗಳನ್ನು ಬೆಳೆಸಲು ಯೋಗ್ಯವಾದಂತಹ ಯಾವುದೇ ರಾಷ್ಟ್ರೀಯ ಪಕ್ಷವಾಗಲಿ ಅಥವಾ ಸ್ಥಳೀಯ ಪಕ್ಷವಾಗಲಿ ನಮ್ಮ ರಾಜ್ಯದಲ್ಲಿ ಇರದಿರುವುದು ಸಹ ಇದಕ್ಕೊಂದು ಮುಖ್ಯ ಕಾರಣ. ಕೆಲಸ ಮಾಡಲು ಕಾರ್ಯಕರ್ತರು ಬೇಕು ಕೆಲಸ ಆದ ಮೇಲೆ ಕಾರ್ಯಕರ್ತ ಕತ್ತೆಗಳು ಯಾವುದಕ್ಕೂ ಕೆಲಸಕ್ಕೆ ಬಾರದು ಎಂಬ ಮನೋಭಾವ.

ಎಲ್ಲ ವಿಚಾರಗಳನ್ನು ಗಮನಕ್ಕೆ ತೆಗೆದು ಕೊಂಡು ಮತದಾರರು ಜಾಗೃತಿಯಿಂದ ಮತ ಚಲಾವಣೆ ಮಾಡಬೇಕು ಎಂಬುದು ಸತ್ಯ.

ರಾಜಕೀಯ ಪ್ರಚಾರದಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರ ಹೇಗೆ ನಿರ್ಬಂಧಿತವೋ. ಅದೇ ರೀತಿ ಎಂಎಲ್ಎ ಮತ್ತು ಎಂಪಿಗಳು ಅಂದರೆ ಶಾಸಕರು ಮತ್ತು ಸಂಸದರು ಸಹ ಒಂದೇ ರೀತಿ ಪರಿಗಣಿಸಲ್ಪಡಬೇಕು.

ಸರ್ಕಾರಿ ಅಧಿಕಾರಿಗಳು, ಉದಾಹರಣೆಗೆ ಪೊಲೀಸ್ ಇಲಾಖೆ, ಶಿಕ್ಷಕ ಇಲಾಖೆ, ವೈದ್ಯಕೀಯ ಇಲಾಖೆ ಅಥವಾ ಯಾವುದೇ ವೇತನ ಪಡೆಯುವ ಅಧಿಕಾರಿಗಳು, ರಾಜಕೀಯ ಪ್ರಚಾರಕ್ಕೆ ಹೋಗಲು ಸಾಧ್ಯವಿಲ್ಲ. ಅಭ್ಯರ್ಥಿ ಅವರ ಸಂಬಂಧಿ ಅಥವಾ ಮಗ ಅಥವಾ ಮಗಳು ಇದ್ದರೂ, ಇದು ಸಂಬಂಧವಿಲ್ಲ. ಇದಕ್ಕೆ ಕಾರಣವೆಂದರೆ ಅವರು ಸಂವಿಧಾನದ ಅಡಿಯಲ್ಲಿ ಆಡಳಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿ ವ್ಯತ್ಯಾಸ ಮತ್ತು ಪ್ರಶ್ನೆಯ ಅಂಶವಿದೆ, ರಾಜಕಾರಣಿಗಳು ಸಂಸತ್ ಸದಸ್ಯ (MP) ಅಥವಾ ವಿಧಾನಸಭಾ ಸದಸ್ಯ (MLA) ಆಗಿ ಚುನಾಯಿತರಾದ ನಂತರ ಸಾರ್ವಜನಿಕ ಸೇವೆ ಮಾಡುತ್ತಾರೆ ಮತ್ತು ವೇತನ ಪಡೆಯುತ್ತಾರೆ.

ಅವರು ನಿರ್ದಿಷ್ಟ ಪಕ್ಷವನ್ನು ಪ್ರಭಾವಿಸಲು ಪರಿಗಣಿಸಬಾರದು, ಏಕೆಂದರೆ ಅವರು ಸಂವಿಧಾನದ ಭಾಗವಾಗಿ ನಾಗರಿಕರಿಗೆ ಸೇವೆ ಮಾಡುತ್ತಿದ್ದಾರೆ ಮತ್ತು ಆಡಳಿತವನ್ನು ಪ್ರಭಾವಿಸುತ್ತಾರೆ.

ಈ ಕಾರಣದಿಂದ, MP ಅಥವಾ MLA ಆಗಿ ಆಯ್ಕೆಯಾದ ವ್ಯಕ್ತಿ ಯಾವುದೇ ರಾಜಕೀಯ ಪ್ರಚಾರಕ್ಕೆ ಹೋಗಬಾರದು, ಏಕೆಂದರೆ ಇದು ಒಂದು ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕಲು ಪ್ರಚಾರ ಮಾಡುವುದಾಗಿದೆ. ಈ ಕೆಲಸವನ್ನು ಯಾವುದೇ ಪಕ್ಷದ ಕಾರ್ಯಕರ್ತರು ಮಾಡಬೇಕು, ಏಕೆಂದರೆ ಅವರು ಸಾರ್ವಜನಿಕರಿಂದ ವೇತನ ಪಡೆಯುವುದಿಲ್ಲ, ಬದಲಿಗೆ ತಮ್ಮ ಪಕ್ಷದಿಂದ ತಮ್ಮ ಕಾರ್ಯಕ್ಕಾಗಿ ವೇತನ ಪಡೆಯುತ್ತಾರೆ.

Leave a Reply

Your email address will not be published. Required fields are marked *