media BHARATH

Defining Ethical Journalism

ಉಚ್ಚ ನ್ಯಾಯಾಲಯದ ನ್ಯಾಯಾಂಗ ನಿಂದನೆ! ಆದರೂ ಸಹ ಏನೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತ… ಮೌನ ವಹಿಸಿರುವ ನಗರ ಪೌರಾಯುಕ್ತ ಶ್ರೀಧರ್

ಕರ್ನಾಟಕ ಉಚ್ಚ ನ್ಯಾಯಾಲಯದ ತಡೆಯಾಗ್ನೇ ಇದ್ದರೂ ಸಹ, ಅದನ್ನು ಗೌರವಯುತವಾಗಿ ಗಮನಿಸದೆ ತಾತ್ಸಾರದಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ನಿಂದನೆ ಮಾಡಿದ ಮುಳಬಾಗಿಲು ತಾಲೂಕು ಆಡಳಿತ. ಈ ಮಧ್ಯೆ ನಗರದ ಮುಖ್ಯ ಭಾಗ ಹಾಗೂ ಇದೇ ಸ್ಥಳದಿಂದ ಪ್ರತಿನಿತ್ಯ ಹಾದು ಹೋಗುವ ನಗರ ಪೌರಾಯುಕ್ತಾರಾದ ಶ್ರೀಧರ್ ಅವರು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೆ ಮಾಲಾರ್ಪಣೆಯೊಂದಿಗೆ ಅನಧಿಕೃತ ಪುತ್ತಳಿ ಅನಾವರಣಗೊಳ್ಳುವಿಕೆಗೆ ಬೆಂಬಲಿಸಿರುವುದು ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಕಾರಣ ಏನೆಂದರೆ ದಿನಾಂಕ 9 ಡಿಸೆಂಬರ್ 2024 ಮುಂಜಾನೆ ಸರಿಸುಮಾರು ನಾಲ್ಕು ಗಂಟೆಯಿಂದ ನಿರ್ಬಂಧಿತ ಚಟುವಟಿಕ ಸ್ಥಳದಲ್ಲಿ ಆಶ್ಚರ್ಯಕರ ಬೆಳವಣಿಗೆ ಹಾಗೂ ನಗರದ ಪೌರಾಯುಕ್ತ ಕಚೇರಿ ತೆರೆದ ನಂತರ ಸಾರ್ವಜನಿಕವಾಗಿ ಸರಿ ಸುಮಾರು 11 ರಿಂದ 12 ಗಂಟೆ ಮಧ್ಯಾಹ್ನದ ಸುಮಾರಿನಲ್ಲಿ ಪುತ್ತಳಿ ಅನಾವರಣ ಹಾಗೂ ಮಲಾರ್ಪಣೆಗಳ ಚಟುವಟಿಕೆ ನಡೆದಿರುವುದು ಹಾಗೂ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೆ, ಕನಿಷ್ಠ ಯಥಾ ಸ್ಥಿತಿಯನ್ನು ಕಾಯ್ದಿರಿಸಿಕೊಳ್ಳುವಲ್ಲಿ ವಿಫಲವಾಗಿರುವ ತಾಲೂಕು ಆಡಳಿತ, ನ್ಯಾಯಾಂಗ ನಿಂದನೆ ಈ ಮಟ್ಟದಲ್ಲಿ ಮಾಡುವುದಾದರೆ ಸಾಮಾನ್ಯ ನಾಗರಿಕರಿಗೆ ನ್ಯಾಯ ಹೇಗೆ ಕೊಡಿಸುತ್ತದೆ ಎಂದು ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ.

ಈ ವಿಷಯವಾಗಿ ಜಿಲ್ಲಾ ಆಡಳಿತ ಕೋಲಾರದ ಜಿಲ್ಲಾಧಿಕಾರಿ ಅಕ್ರಂಪಾಶರವರು ಪೌರಾಯುಕ್ತ ಶ್ರೀಧರ್ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಾಲೂಕಿನ ನಾಗರಿಕರು ಗಮನಿಸುತ್ತಿರುತ್ತಾರೆ. . ಈ ಅಂಶಗಳ ಆಧಾರದ ಮೇಲೆ ಜಿಲ್ಲಾ ಆಡಳಿತ ಈ ವಿಷಯ ಅಂದರೆ ನ್ಯಾಯಾಂಗ ನಿಂದಲೇ ನಡೆದಿರುವ ಸಂದರ್ಭ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಪ್ರಮುಖವಾದ ಅಂಶವಾಗಿದೆ.

ಈ ವಿಷಯವಾಗಿ ಜಿಲ್ಲಾ ಆಡಳಿತ ಕೋಲಾರದ ಜಿಲ್ಲಾಧಿಕಾರಿ ಅಕ್ರಂಪಾಶರವರು ಪೌರಾಯುಕ್ತ ಶ್ರೀಧರ್ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಾಲೂಕಿನ ನಾಗರಿಕರು ಗಮನಿಸುತ್ತಿರುತ್ತಾರೆ. ಈ ಅಂಶಗಳ ಆಧಾರದ ಮೇಲೆ ಜಿಲ್ಲಾ ಆಡಳಿತ ಈ ವಿಷಯ, ಅಂದರೆ ನ್ಯಾಯಾಂಗ ನಿಂದನೆ ನಡೆದಿರುವ ಸಂದರ್ಭ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಪ್ರಮುಖವಾದ ಅಂಶವಾಗಿದೆ.


ನಗರದ ಸೌಂದರ್ಯ ಸರ್ಕಲ್ ನಲ್ಲಿ ಈ ಹಿಂದೆ ಸಾಮರಸ್ಯ ಮತ್ತು ನ್ಯಾಯಯುತ ಆಡಳಿತದ ಪ್ರತೀಕವಾಗಿ ನಗರದ ಹಾಗು ತಾಲೂಕಿನ ಎಲ್ಲಾ ನಾಗರಿಕರ ನಂಬಿಕೆಯನ್ನು ಎತ್ತಿ ಹಿಡಿಯುವಂತೆ ನಾಡಪ್ರಭು ಶ್ರೀ ಕೆಂಪೇಗೌಡರ ಪುತ್ತಳಿ ಅನಾವರಣ ಆಗಬೇಕಿದ್ದ ಸ್ಥಳದಲ್ಲಿ, ರಾಜಕೀಯ ದುರುದ್ದೇಶದಿಂದ ಮತ್ತು ಭ್ರಷ್ಟಾಚಾರ ಯುಕ್ತ ಮತ್ತು ಲಿಖಿತ ರೂಪದಲ್ಲಿ ಹಲವಾರು ಬಾರಿ ಗಮನಕ್ಕೆ ತಂದರು ವಿಷಯದ ಪ್ರಾಮುಖ್ಯತೆ ಅರಿಯದೆ ಬೇಜವಾಬ್ದಾರಿತನದಿಂದ ಕರ್ತವ್ಯ ದುರುಪಯೋಗ ಹಾಗೂ ಅಧಿಕಾರ ದುರ್ಬಳಕೆ ಮಾಡಿದ ಪೌರಾಯುಕ್ತ ಶ್ರೀಧರ್ ಮತ್ತು ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಆಡಳಿತವು ಸೇರಿದಂತೆ ರಾಜಕೀಯ ಹಿತಾಶಕ್ತಿಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಪುತ್ತಳಿ ಇಡುವ ಬದಲು ಅನಧಿಕೃತವಾಗಿ ದಿವಂಗತ ಜೆಡಿಎಸ್ ನ ರಾಜಕೀಯ ದುರೀಣ ಹಾಗೂ ಮಾಜಿ ಶಾಸಕ ಆಲಂಗೂರು ಶ್ರೀನಿವಾಸ್ ರವರ ಪುತ್ತಳಿಯನ್ನು ಸರ್ಕಾರಿ ಸೇವೆಗೆ ಮತ್ತು ಸಂವಿಧಾನವನ್ನು ಎತ್ತಿ ಹಿಡಿಯ ಬೇಕಾಗಿದ್ದ ಆಡಳಿತವೂ ಸೇರಿ ನಾಡಪ್ರಭು ಶ್ರೀ ಕೆಂಪೇಗೌಡರ ಅಸ್ಮಿತೆಗೆ ರಾಜಕೀಯ ಲೇಪನ ಮಾಡಿರುತ್ತದೆ.
ಪ್ರಸಕ್ತ ತಾಲೂಕಿನ ಅತಿ ಹೆಚ್ಚು ಒಕ್ಕಲಿಗ ಸಮುದಾಯದ ಭಾವನೆಗಳನ್ನು ಲೆಕ್ಕಿಸದೆ ನಾಡಪ್ರಭು ಶ್ರೀ ಕೆಂಪೇಗೌಡರ ಪುತ್ತಳಿಯಿಡಲು ಸಾರ್ವಜನಿಕರಿಂದ ದೇಣಿಗೆ ಪಡೆದು ಯಾವುದೇ ರೀತಿಯ ಪಾರದರ್ಶಕತೆ ಇಲ್ಲದೆ ಇಡೀ ರಾಜ್ಯದಲ್ಲಿ ಎಲ್ಲೂ ಇಲ್ಲದಂತೆ ಇದೆ ಮೊದಲ ಬಾರಿಗೆ ಅಧಿಕೃತ ನಾಡಪ್ರಭು ಶ್ರೀ ಕೆಂಪೇಗೌಡರ ಪುತ್ತಳಿ ಇಡುವ ಜೊತೆಗೆ ಅನಧಿಕೃತವಾಗಿ ರಾಜಕೀಯ ನಾಯಕರನ್ನು ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವುದು ಒಂದು ಕಡೆ ಇಡೀ ತಾಲೂಕಿನ ಒಕ್ಕಲಿಗ ಸಮುದಾಯಕ್ಕೆ ಆಘಾತವಾಗಿರುವುದಾದರೆ ಮತ್ತೊಂದು ಕಡೆ ನಗರದ ಎಲ್ಲ ಕೌನ್ಸಿಲರ್ ಹಾಗೂ ಎಲ್ಲ ಸಮುದಾಯದ ಗೌರವಯುತರು ಅಧಿಕೃತವಾದ ನಾಡಪ್ರಭು ಶ್ರೀ ಕೆಂಪೇಗೌಡರ ಪುತ್ತಳಿ ಪಕ್ಕದಲ್ಲಿ ರಾಜಕೀಯ ಮಾಡುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿರುತ್ತಾರೆ ಎಂಬ ಮಾತುಗಳು ತಾಲೂಕಿನ ಅತ್ಯಂತ ಹಬ್ಬಿದೆ.


ಇಷ್ಟೆಲ್ಲ ನಡೆಯುತ್ತಿದ್ದರು ಕೋಲಾರ ಜಿಲ್ಲಾ ಒಕ್ಕಲಿಗರ ಸಂಘ ಅಧ್ಯಕ್ಷರಾದ ಕೆ ವಿ ಶಂಕರಪ್ಪನವರು ಹಾಗೂ ಪ್ರಸಕ್ತ ಒಕ್ಕಲಿಗರ ಸಂಘದ ನಿರ್ದೇಶಕರುಗಳು ನಾಡಪ್ರಭು ಶ್ರೀ ಕೆಂಪೇಗೌಡರ ಅಸ್ಮಿತೆಯನ್ನು ಕಾಪಾಡುವ ವಿಷಯದಲ್ಲಿ ಬೇಜವಾಬ್ದಾರಿತನ ತೋರಿಸಿರುತ್ತಾರೆ. ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಕೆವಿ ಶಂಕರಪ್ಪನವರು ಜೆಡಿಎಸ್ ಪಕ್ಷದ ಹಿರಿಯ ಪ್ರಮುಖರು ಎಂಬುದನ್ನು ಇಲ್ಲಿ ಮರೆಯುವಂತಿಲ್ಲ, ಆದರೆ ಏನೇ ಇರಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾರೇ ಆಗಲಿ ರಾಜಕೀಯವನ್ನು ಹೊರತುಪಡಿಸಿ ಸಮುದಾಯದ ಸಂಘಟನೆಗಳನ್ನು ಸಂಘಟಿಸಬೇಕು ಹಾಗೂ ಸಮಾಜದಲ್ಲಿ ಎಲ್ಲಾ ಸಮುದಾಯಗಳ ಐಕ್ಯತೆ ಮತ್ತು ಸಾಮರಸ್ಯ ಬೆಳೆಸುವಲ್ಲಿ ಗಮನ ಕೊಡಬೇಕು ಎಂದು ಜಿಲ್ಲೆಯ ಅನೇಕ ಸಂಘಟನೆಗಳು ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಹಲವಾರು ಬಾರಿ ಮನವಿ ಮಾಡುತ್ತಲೇ ಬಂದಿರುತ್ತದೆ ಎಂದು ಮುಳಬಾಗಿಲು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರೋಹನ್ ಗೌಡರವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *