media BHARATH

Defining Ethical Journalism

ರಾಷ್ಟ್ರೀಯ ಉತ್ಸವಗಳು ಐಕ್ಯತಾ ಪೂರಕವಾಗಿರಬೇಕು ಆದರೆ ಶ್ರೇಷ್ಠ ಅಂಬೇಡ್ಕರ್ ಜಿ ರವರ ಜಯಂತಿಯನ್ನು ಜಾತೀಯ ಜಯಂತಿಯನ್ನಾಗಿ ಮಾಡುವ ಷಡ್ಯಂತ್ರ… ಬೇಲಿಯೇ ಎದ್ದು ಹೊಲ ನುಂಗುವಂತಹ ಪರಿಸ್ಥಿತಿ?

ಮೀಸಲಾತಿ ಕ್ಷೇತ್ರದ ಶಾಸಕರು ಕೇವಲ ಮೀಸಲಾತಿ ವ್ಯಾಪ್ತಿಗೆ ಬರುವ ಸಮುದಾಯಗಳನ್ನು ನಮ್ಮವರು ಎಂದು ಕರೆಯುವುದು ಎಷ್ಟು ಸರಿ? ಎಂಎಲ್ಎ ಆಗುವ ಮುಂಚೆ ದಲಿತ ಹಾಗೂ ಹಿಂದುಳಿದ ವರ್ಗಗಳ ನಾಯಕರಾಗಿ ಇರುವುದು ತಪ್ಪೇನಿಲ್ಲ… ಆದರೆ, ಮೀಸಲಾತಿ ವ್ಯವಸ್ಥೆಯನ್ನು ಕೊಟ್ಟಿರುವುದು ಹಿಂದುಳಿದ ಮತ್ತು ದಲಿತ ಯೋಗ್ಯ ನಾಗರಿಕರು ನಾಯಕತ್ವವನ್ನು ಜಾತ್ಯತೀತವಾಗಿ ನಿರ್ವಹಿಸಲು ಒಂದು ಅವಕಾಶ ಎಂಬುದು ವಾಸ್ತವಂಶ. ಡಾ. ಬಿ. ಆರ್. ಅಂಬೇಡ್ಕರ್ ರವರು ಮೆಹರ್ ಸಮುದಾಯದ ಧ್ರುವತಾರೆಯಾಗಿ ಎಲ್ಲಾ ರೀತಿಯ ಅರ್ಹತೆಗಳನ್ನು ತಮ್ಮ ವಿದ್ಯಾರ್ಹತೆ ಮತ್ತು ರಾಷ್ಟ್ರದೆಡಗಿನ ದೂರ ದೃಷ್ಟಿ ಮತ್ತು ದಲಿತರು ಅಂದರೆ ಸಮಾಜದಲ್ಲಿ ಒತ್ತಡದಲ್ಲಿರುವ ನಾಗರಿಕರು ಅಥವಾ ಸಮುದಾಯ ಎಂಬ ಅರ್ಥವನ್ನು ಸಮರ್ಪಕವಾಗಿ ಮೀಸಲಾತಿ ವ್ಯವಸ್ಥೆಯನ್ನು ನಿರ್ದಿಷ್ಟ ಅವಧಿಗೆ ಕೊಟ್ಟು ಸಮಾನತೆಯನ್ನು ಮತ್ತು ರಾಷ್ಟ್ರೀಯ ಸಾಮರಸ್ಯವನ್ನು ತರಲು ಕಾರಣರಾದ ರಾಷ್ಟ್ರದ ಅತ್ಯಮೂಲ್ಯ ವ್ಯಕ್ತಿತ್ವ ಹೊಂದಿದ್ದರು.

ಕೆಲವು ಶಾಸಕಾಂಗ ವ್ಯವಸ್ಥೆಯ ಸೇವಾ ಮನೋಭಾವದ ಜ್ಞಾನ ಇಲ್ಲದಿರುವ ಅಸಮರ್ಥ ವ್ಯಕ್ತಿತ್ವವುಳ್ಳ ಜನರು ಶಾಸಕರಾಗಿ ಹೊರಹೊಮ್ಮಿ ಕೇವಲ ಹಣದಿಂದ ಚುನಾವಣೆಯನ್ನು ವ್ಯಾಪಾರಿಕರಣದ ಹಾಗೂ ಜೂಜಾಟದ ಕೂಟವನ್ನಾಗಿ ಮಾಡಿಕೊಂಡು ಶಾಸಕರಾಗಿ ಹೊರಹೊಮ್ಮಿ ದಲಿತರು ಮತ್ತು ಹಿಂದುಳಿದ ವರ್ಗದ ಸವಲತ್ತುಗಳನ್ನು ಕೇವಲ ಹಣದ ಅರ್ಹತೆಯಿಂದ ಪಡೆದು ಸದೃಢರಾಗಿ ಉದ್ಯಮಗೀಳಾಗಿ ಇದ್ದರೂ ಸಹ ತಾವು ದಲಿತರು ಎಂದು ಹೇಳಿಕೊಳ್ಳುವುದು ಯೋಗ್ಯ ವಿಚಾರವೇ ಎಂದು ಸಮಾಜ ನಿರ್ಧರಿಸಬೇಕು.

ಮುಳಬಾಗಿಲು ತಾಲೂಕಿನ ಪ್ರಸಕ್ತ ಶಾಸಕರಾದ ಸಮೃದ್ಧಿ ಮಂಜುನಾಥ್ ರವರು ದಲಿತರು ಎಂದು ಹೇಳಿಕೊಳ್ಳುವುದು ಸರಿಯೇ ಅಥವಾ ತಪ್ಪೇ… ಈ ಮಾತು ವಿಮರ್ಶೆಯಾಗಲು ಕಾರಣವೇನೆಂದರೆ, ಅವರಿಗೆ ಮೀಸಲಾತಿ ವ್ಯವಸ್ಥೆಯಲ್ಲಿ ಶಾಸಕರಾಗುವ ಅವಕಾಶ ಕಲ್ಪಿಸಿ ಪ್ರಸಕ್ತ ಅವರು ಶಾಸಕರು ಆಗಿರುತ್ತಾರೆ,. ಹೀಗಿರುವಾಗ ಅವರು ಕ್ಷೇತ್ರದ ಎಲ್ಲರಿಗೂ ನಾಯಕರಾಗಿ ಮತ್ತು ಮೊದಲ ಪ್ರಜೆಯಾಗಿ ನಮ್ಮೆಲ್ಲರನ್ನು ಪ್ರತಿನಿಧಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಈ ವಿಚಾರ ಅವರಿಗೆ ತಿಳಿದಿದೆಯೋ ಅಥವಾ ಈ ವಿಚಾರವಾಗಿ ಒಂದು ವಿಮರ್ಶೆ ನಡೆಯಲೇಬೇಕು ಅಥವಾ ಇಲ್ಲ ಎಂಬ ಡೋಲಾಯಮಾನ ಸ್ಥಿತಿ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಇದಕ್ಕೆ ಪೂರಕ ಎಂಬಂತೆ ದಿನಾಂಕ 26-03-2025 ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ಜಿ ರವರ ಜಯಂತಿಯ ಪೂರ್ವಭಾವಿ ಸಭೆಯೇ ಸಾಕ್ಷಿಯಾಗಿದೆ, ಈಗಾಗಲೇ ನಗರದಲ್ಲಿ ಅನೇಕ ಸಂಘಟನೆಗಳು ಹಾಗೂ ನಾಗರಿಕ ವೇದಿಕೆ, ಕುರುಬರ ಸಂಘ, ಸವಿತಾ ಸಮಾಜ ಸಂಘ, ಬ್ರಾಹ್ಮಣ ಸಂಘ, ಒಕ್ಕಲಿಗರ ಸಂಘ ಎಲ್ಲವೂ ನೋಂದಣಿಯಾಗಿದ್ದು ಹಾಗೂ ಚುನಾವಣಾ ಸಂದರ್ಭದಲ್ಲಿ ಅನೇಕ ನಾಯಕರು ಎಲ್ಲರ ಬಳಿಯೂ ಬಂದು ಮತಯಾಚನೆ ಮಾಡಿರುವ ನಿದರ್ಶನಗಳು ಮತ್ತು ಸಾಕ್ಷಿಗಳು ಸಾರ್ವಜನಿಕರಿಗೆ ತಿಳಿದಿರುವ ವಿಚಾರವೇ ಆಗಿದೆ. ಶಾಸಕರ ಜಾತೀಯ ರಾಜಕೀಯದ ಪರಮಾವಧಿಯಾಗಿ ಪೂರ್ವಭಾವಿ ಸಭೆಯು ಒಂದು ರೀತಿಯ ದಲಿತ ಮತ್ತು ಹಿಂದುಳಿದ ವರ್ಗಗಳ ಸಂಘಟನೆಗಳ ಸಭೆಯಾಗಿ ನಡೆದಿರುವುದು ಹಾಗೂ ಪೂರಕವೆಂಬಂತೆ ತಾಲೂಕು ಆಡಳಿತ ಮತ್ತು ಅಧಿಕಾರಿಗಳು ಸರ್ಕಾರಿ ಆಚರಣೆಗಳು ಮತ್ತು ಉತ್ಸವಗಳನ್ನು ಬೇಕಾಬಿಟ್ಟಿ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಮರೆತು ಜಾತಿ ಜಾತಿಗಳ ಮಧ್ಯೆ ವಿಭಜಿಸಿ ಸಮಾಜವನ್ನು ಒಡೆಯುವ ಯಂತ್ರವಾಗಿರುವುದು ಆಘಾತಗಾರಿ ಸಂಗತಿಯಾಗಿದೆ.

ಪ್ರಸಕ್ತ ನಡೆಯುತ್ತಿರುವ ಸರ್ಕಾರಿ ಉತ್ಸವಗಳು ಮತ್ತು ಆಚರಣೆಗಳು ಬುದ್ಧ ಬಸವ ಅಂಬೇಡ್ಕರ್ ಕೆಂಪೇಗೌಡರ ಜಯಂತಿಗಳು ಸಮಾಜದಲ್ಲಿ ಜಾತಿಯ ಭಾವನೆಗಳನ್ನು ದೂರ ಮಾಡಿ ಐಕ್ಯತೆಯನ್ನು ಹಾಗೂ ಸಮರಸ್ಯವನ್ನು ಸಾರ್ವಜನಿಕರಲ್ಲಿ ಮೂಡಿಸುವ ವೈಚಾರಿಕತೆಯಿಂದ ತೆಗೆದುಕೊಂಡ ನಿರ್ಧಾರವಾಗಿರುತ್ತದೆ ಆದರೆ ವಿಪರ್ಯಾಸ ಪ್ರಸಕ್ತ ಮುಳಬಾಗಿಲು ತಾಲೂಕಿನ ಆಡಳಿತ ಅಧಿಕಾರಿಗಳು ಮತ್ತು ಅದರ ವ್ಯವಸ್ಥೆ ಮೊದಲ ಬಾರಿ ಶಾಸಕರಾಗಿ ಇನ್ನೂ ಅನುಭವ ಇಲ್ಲದ ಜಾತೀಯ ಭಾವನೆಗಳಿಗೆ ಹೆಚ್ಚು ಒಲವು ಕೊಡುವ ಕ್ಷೇತ್ರದ ಹಿಂದುಳಿದ ವರ್ಗಗಳಿಗೆ ಸೀಮಿತವಾಗಿರುವ ಶಾಸಕರು ಎಂಬಂತಹ ವ್ಯಕ್ತಿತ್ವವನ್ನು ಹೊರಹೊಮ್ಮುತ್ತಿರುವ ಸಮೃದ್ಧಿ ಮಂಜುನಾಥ್ ರವರಿಗೆ ಬಹಳ ಮನ್ನಣೆ ಕೊಡುವಂತೆ ಕಾಣುತ್ತಿದೆ.

ಇದೇ ರೀತಿ ಜಾತಿಯ ಭಾವನೆಗಳನ್ನು ಮುನ್ನಡೆಸಿದರೆ ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯಾಗುವುದರಲ್ಲಿ ಸಂಶಯವೇ ಇಲ್ಲ, ಈ ಹಿಂದೆಯೂ ಶ್ರೀನಿವಾಸಪುರದ ವ್ಯಾಪ್ತಿಯಲ್ಲಿ ನಡೆದ ಒಂದು ಕೊಲೆ ಪ್ರಕರಣಕ್ಕೆ ಮಾಧ್ಯಮಗಳೊಂದಿಗೆ ಹೇಳಿಕೆ ನೀಡುವಾಗ ಸಮೃದ್ಧಿ ಮಂಜುನಾಥ್ ರವರು ದಲಿತರು ಎಂಬ ಕಾರಣಕ್ಕೆ ಅನ್ಯ ಮತಸ್ಥರು ಈ ಕೊಲೆಯನ್ನು ಮಾಡಿರುತ್ತಾರೆ ಎಂಬ ಹೇಳಿಕೆಯನ್ನು ಕೊಟ್ಟಿರುತ್ತಾರೆ ಹಾಗೂ ನಂತರ ತನಿಖೆಯ ವಿಚಾರ ಹೊರ ಬಂದಾಗ ಅವರದೇ ಜಾತಿಯ ವ್ಯಕ್ತಿ ವೈಯಕ್ತಿಕ ವಿಷಯಗಳಿಗೆ ಕೊಲೆ ನಡೆದಿರುವುದು ಸಾಬೀತಾಗುತ್ತದೆ, ಈ ವಿಚಾರದಲ್ಲೂ ಸಹ ಸಮೃದ್ಧಿ ಮಂಜುನಾಥ್ ರವರು ಏಕ ಪಕ್ಷಿಯ ಜಾತಿವಾದತನದ ನಿಲುವನ್ನು ವ್ಯಕ್ತಪಡಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇನ್ನು ಉಳಿದಂತೆ ಮುಳಬಾಗಿಲು ತಾಲೂಕಿನಲ್ಲಿ ಅದೆಷ್ಟೇ ರಾಜಕೀಯ ವ್ಯಕ್ತಿಗಳು ಸಂಘಟನೆಗಳು ಅಥವಾ ಅಧಿಕಾರಶಾಹಿ ಹಣವಂತರು ಪ್ರಯತ್ನ ಪಟ್ಟರು ಸಹ, ಅತಿ ಹೆಚ್ಚು ಮಂದಿ ಜಾತಿಯ ಭಾವನೆಗಳಿಂದ ವ್ಯವಹರಿಸದೆ ಸಹೋದರ ಮತ್ತು ಭಾರತೀಯ ಏಕತಾಭಾವನೆಯಲ್ಲಿ ಸಂವಿಧಾನವನ್ನು ಅನುಸರಿಸುತ್ತಿರುವುದು ವಾಸ್ತವದ ವಿಷಯವಾಗಿದೆ.

ಇನ್ನುಳಿದಂತೆ ಈ ಬಾರಿಯ ಅಂಬೇಡ್ಕರ್ಜಿ ರವರ ಜಯಂತಿ ಉತ್ಸವವನ್ನು ಜಾತಿಗಳಿಗೆ ಸೀಮಿತವಾಗಿ ನಡೆಸುವ ಹುನ್ನಾರ ಆಡಳಿತ ಮತ್ತು ಶಾಸಕರು ಮಾಡುವುದೇ ಆದರೆ ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಶಾಸಕರು ಮತ್ತು ಆಡಳಿತವನ್ನು ಹೊರತುಪಡಿಸಿ ಅನ್ಯ ಎಲ್ಲಾ ಜಾತಿಯ ಸಂಘಟನೆಗಳು ಐಕ್ಯತೆಯಿಂದ ನಿಜವಾದ ಅಂಬೇಡ್ಕರ್ ಜಿ ರವರ ಅಸ್ಮಿತೆಗಳನ್ನು ಎತ್ತಿ ಹಿಡಿದು ಅವರ ಗೌರವವನ್ನು ಮತ್ತಷ್ಟು ಹೆಚ್ಚಿಸಲು ನಿಜವಾದ ಸಂವಿಧಾನದ ಸಮಾನತೆಯ ಸಾಮರಸ್ಯ ಹಬ್ಬವನ್ನು ಮಾಡಲು ಈಗಾಗಲೇ ಚಿಂತನೆಗಳು ನಡೆಯುತ್ತಿವೆ ಎಂಬ ವದಂತಿಗಳು ತಾಲೂಕಿನ ಎಲ್ಲೆಡೆ ಹಬ್ಬುತ್ತಿದೆ, ಜನರನ್ನು ಜಾತಿಯ ಭಾವನೆಗಳಲ್ಲಿ ಹೊಡೆಯಲು ಪ್ರಯತ್ನಿಸಿದರೆ ಮುಂಬರುವ ದಿನಗಳಲ್ಲಿ ನಾಗರಿಕರು ಹಾಗೂ ಪ್ರಜ್ಞಾವಂತ ವಿದ್ಯಾವಂತ ಯುವಜನತೆ ಮೂರ್ಖರಲ್ಲ ಎಂಬ ಸಂದೇಶವನ್ನು ಚುನಾವಣೆಯಲ್ಲಿ ತೋರಿಸುತ್ತಾರೆ ಎಂಬ ನಂಬಿಕೆ ಅನೇಕ ಜನರಲ್ಲಿ ದೃಢವಾಗಿರುವುದೇ ನಿಜವಾದ ಸಂವಿಧಾನದ ಶಕ್ತಿಯಾಗಿದೆ.

ಎಲ್ಲ ವಿಚಾರಗಳನ್ನು ಜನಸಾಮಾನ್ಯರು ಅರಿತು ಸ್ವಯಂ ಪ್ರೇರಿತರಾಗಿ ಸಂವಿಧಾನವನ್ನು ಮತ್ತು ಅವರಿಗೆ ಇರುವ ಸಂವಿಧಾನಿಕ ಹಕ್ಕುಗಳನ್ನು ತಿಳಿದುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಮುಳಬಾಗಿಲು ತಾಲೂಕಿನಲ್ಲಿ ಜನಸಾಮಾನ್ಯರ ಮಾತುಗಳಿಗೆ ಮನ್ನಣೆ ಇರುವುದಿಲ್ಲ ಎಂಬುದನ್ನು ಮರೆಯಬಾರದು.

ಶಾಸಕರಾಗಲಿ ಹಾಗೂ ಅವರ ಅನುಯಾಯಿ ಸಂಘಟನೆಗಳಾಗಲಿ, ಜಾತಿವಾದವನ್ನು ಹತ್ತಿಕ್ಕಲು ಸಾರ್ವಜನಿಕ ವೇದಿಕೆ ಮತ್ತು ಸರ್ಕಾರಿ ಹಬ್ಬಗಳು ಮತ್ತು ಉತ್ಸವಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದರೆ ತಾಲೂಕಿನ ಅನ್ಯ ಸಮುದಾಯಗಳಾದ ಒಕ್ಕಲಿಗರು ಕುರುಬರು ಬಲಜಿಗರು ವಿಶ್ವಕರ್ಮ ಬ್ರಾಹ್ಮಣರು ಮಡಿವಾಳರು ಯಾದವರು ಮುಸಲ್ಮಾನರು ಜಾತಿವಾದಕ್ಕೆ ಮನ್ನಣೆ ಕೊಡದ ವಿದ್ಯಾವಂತ ಎಸ್. ಸಿ /ಎಸ್. ಟಿ ಸಮುದಾಯಗಳಿಗೆ ಸೇರುವ ಎಲ್ಲ ಜಾತಿಗಳು ಇಂತಹ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಬರುವ ವಿಚಾರಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ತಮ್ಮ ತಮ್ಮ ಜಾತಿಯ ಸಂಘಟನೆಗಳ ಸಭೆಗಳನ್ನು ನಡೆಸಿ ಹೊಸ ನಾಯಕತ್ವವನ್ನು ಮುನ್ನಡೆಗೆ ತಂದು ಎಲ್ಲ ಜಾತಿಗಳ ಸಾಮರಸ್ಯಯನ್ನು ಸಾಧಿಸಿ ಸಂವಿಧಾನವನ್ನು ಎತ್ತಿ ಹಿಡಿಯುವ ಹಾಗೂ ರಾಷ್ಟ್ರೀಯ ಐಕ್ಯತೆಯನ್ನು ಪುನರ್ ಸ್ಥಾಪಿಸುವ ಕಾರ್ಯ ಮಾಡುವುದು ಅನಿವಾರ್ಯವಾಗುತ್ತದೆ.

Leave a Reply

Your email address will not be published. Required fields are marked *