media BHARATH

Defining Ethical Journalism

ಕಂದಾಯ ಭೂಮಿ ಒತ್ತುವರಿ ಮಾಡಿದವರಿಗೆ ಶಾಕ್‌! ರಾಜ್ಯಾದ್ಯಂತ ಸೋಮವಾರದಿಂದ ಕಟ್ಟುನಿಟ್ಟಿನ ತೆರವು ಕಾರ್ಯಾಚರಣೆ

Revenue Land Strict Evacuation Operation In Karnataka :

ರಾಜ್ಯದಲ್ಲಿ ಕಂದಾಯ ಇಲಾಖೆಯ ಅರ್ಧದಷ್ಟು ಭೂಮಿ ಒತ್ತುರಿಯಾಗಿದೆ. ಈ ಹಿನ್ನೆಲೆ ತಹಶೀಲ್ದಾರ್‌ಗಳಿಗೆ ಟಾರ್ಗೆಟ್‌ ನೀಡಿ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ. ಡಿಸಿಗಳಿಂದ ಪ್ರತಿ ವಾರ ಪ್ರಗತಿ ಪರಿಶೀಲನೆ ಮಾಡಲಾಗುತ್ತದೆ. ನಿರ್ಲಕ್ಷ್ಯ ತೋರುವ ತಹಸೀಲ್ದಾರ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

ಹೈಲೈಟ್ಸ್‌:

  • ಕರ್ನಾಟಕದಲ್ಲಿ 13.17 ಲಕ್ಷ ಎಕರೆ ಕಂದಾಯ ಭೂಮಿ ಒತ್ತುವರಿ ಪತ್ತೆ.
  • ರಾಜ್ಯಾದ್ಯಂತ ಕಟ್ಟುನಿಟ್ಟಿನ ತೆರವು ಕಾರ್ಯಾಚರಣೆ ಆರಂಭಿಸಲು ಕಂದಾಯ ಇಲಾಖೆ ಸಜ್ಜಾಗಿದೆ.
  • ಡಿಸಿಗಳಿಂದ ಪ್ರತಿ ವಾರ ಪ್ರಗತಿ ಪರಿಶೀಲನೆ ; ನಿರ್ಲಕ್ಷ್ಯ ತೋರುವ ತಹಸೀಲ್ದಾರ್‌ಗಳ ವಿರುದ್ಧ ಕಠಿಣ ಕ್ರಮ.

ಬೆಂಗಳೂರು: ರಾಜ್ಯದಲ್ಲಿ ಈವರೆಗೆ 13.17 ಲಕ್ಷ ಎಕರೆ ಕಂದಾಯ ಭೂಮಿ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಿರುವ ಕಂದಾಯ ಇಲಾಖೆಯು ಸೋಮವಾರ (ಸೆಪ್ಟೆಂಬರ್‌ 2 ) ರಾಜ್ಯಾದ್ಯಂತ ಕಟ್ಟುನಿಟ್ಟಿನ ತೆರವು ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ.

ರಾಜ್ಯಾದ್ಯಂತ ಒಟ್ಟು 239 ತಹಸೀಲ್ದಾರ್‌ಗಳಿದ್ದು, ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯಲ್ಲಿತಿಂಗಳಿಗೆ 10ರಿಂದ 20 ಒತ್ತುವರಿ ಪ್ರಕರಣಗಳಲ್ಲಿತೆರವು ಕಾರ್ಯ ಕೈಗೊಳ್ಳಬೇಕು. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ವಾರಾಂತ್ಯದಲ್ಲಿ ಪ್ರಗತಿ ಪರಿಶೀಲಿಸಿ ವಿವರವನ್ನು ಕಂದಾಯ ಆಯುಕ್ತಾಲಯಕ್ಕೆ ಸಲ್ಲಿಸಲಿದ್ದಾರೆ. ಆ ಮೂಲಕ ವಾರ, ಮಾಸಿಕವಾರು ಪ್ರಗತಿ ಪರಿಶೀಲನೆ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತ್ವರಿತ ಹಾಗೂ ಸ್ಪರ್ಧಾತ್ಮಕವಾಗಿ ನಡೆಸಿ ಕಂದಾಯ ಭೂಮಿಯನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಗೆ ಕ್ಷಣಗಣನೆ ಶುರುವಾಗಿದೆ.

ಕೆರೆ, ಸ್ಮಶಾನ ಭೂಮಿ ಒತ್ತುವರಿಯನ್ನು ಆದ್ಯತೆ ಮೇರೆಗೆ ತೆರವುಗೊಳಿಸಬೇಕು. ಕಂದಾಯ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ವಾಣಿಜ್ಯ ಕಟ್ಟಡ, ಇತರೆ ರೀತಿಯಲ್ಲಿಲಾಭದಾಯಕ ಉದ್ದೇಶಕ್ಕೆ ಅಭಿವೃದ್ಧಿಪಡಿಸಿದ್ದರೆ ಅವುಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಕೃಷಿ ಭೂಮಿಯಾಗಿದ್ದರೆ, ಬೆಳೆ ಬೆಳೆದಿದ್ದರೆ, ಕೃಷಿ ಚಟುವಟಿಕೆ ನಡೆದಿರುವ ಭೂಮಿಯ ಒತ್ತುವರಿ ಕೊನೆಯ ಹಂತದಲ್ಲಿಪರಿಶೀಲಿಸಿ ನಿಯಮಾನುಸಾರ ತೆರವುಗೊಳಿಸಲು ಇಲಾಖೆ ನಿರ್ಧರಿಸಿದೆ.

ಲ್ಯಾಂಡ್‌ ಬೀಟ್‌ ಆ್ಯಪ್‌

ರಾಜ್ಯಾದ್ಯಂತ ಒಟ್ಟು ಕಂದಾಯ ಇಲಾಖೆ, ಶಿಕ್ಷಣ, ಅರಣ್ಯ, ಆರೋಗ್ಯ, ಲೋಕೋಪಯೋಗಿ ಸೇರಿದಂತೆ ನಾನಾ ಇಲಾಖೆಗಳಿಗೆ ಸೇರಿದ 14.1 ಲಕ್ಷ ಸರಕಾರಿ ಆಸ್ತಿಗಳಿವೆ ಎಂದು ಲೆಕ್ಕ ಹಾಕಲಾಗಿದೆ. ಸರಕಾರಿ ಜಮೀನು ವಿವರಗಳನ್ನು ‘ಲ್ಯಾಂಡ್‌ ಬೀಟ್‌’ ಆ್ಯಪ್‌ನಲ್ಲಿದಾಖಲಿಸಲು ಸೂಚಿಸಲಾಗಿತ್ತು. ಹಾಗಾಗಿ ಜಿಲ್ಲಾವಾರು, ತಾಲೂಕುವಾರು ಹಾಗೂ ಗ್ರಾಮವಾರು ಸರ್ವೇ ನಂಬರ್‌ವಾರು ಲೊಕೇಷನ್‌ಸಹಿತ ವಿಸ್ತೀಣದ ಮಾಹಿತಿ ಲಭ್ಯವಾಗುತ್ತಿದೆ.

ಆ ಮೂಲಕ ರಾಜ್ಯದಲ್ಲಿ 1.1 ಕೋಟಿ ಎಕರೆ ಸರಕಾರಿ ಭೂಮಿಯಿರುವುದು ಗೊತ್ತಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳು ಈವರೆಗೆ 13.3 ಲಕ್ಷ ಆಸ್ತಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಖಾತರಿಪಡಿಸಿಕೊಂಡು ಆ್ಯಪ್‌ನಲ್ಲಿ ಬಹುತೇಕ ವಿವರ ದಾಖಲಿಸುವಲ್ಲಿಯಶಸ್ವಿಯಾಗಿದ್ದಾರೆ. ಅದರಲ್ಲಿ 2.7 ಲಕ್ಷ ಆಸ್ತಿಗಳನ್ನು ಕಂದಾಯ ಭೂಮಿ ಎಂದೂ ಗುರುತಿಸಲಾಗಿದೆ.

ರಾಜ್ಯಾದ್ಯಂತ ಸುಮಾರು 26 ಲಕ್ಷ ಎಕರೆ ಕಂದಾಯ ಭೂಮಿ ಇರುವುದು ಕಂಡುಬಂದಿದೆ. ಈ ಪೈಕಿ 13.17 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚುವಲ್ಲಿಇಲಾಖೆ ಯಶಸ್ವಿಯಾಗಿದೆ. ಇದರಲ್ಲಿನಮೂನೆ- 50, 53, 57ರ ಸಲ್ಲಿಕೆಯಾಗಿ ಬಗರ್‌ ಹುಕುಂ ಸಮಿತಿಯಲ್ಲಿ ಬಾಕಿ ಇರುವ ಪ್ರಕರಣಗಳ ಭೂಮಿಯೂ ಸೇರಿದೆ.

ಸರ್ವೆ ಜತೆಗೇ ಒತ್ತುವರಿ ತೆರವು

ಇಲಾಖೆಯು ಸರ್ವೆ ಜತೆಗೆ ಜತೆಗೆ ಒತ್ತುವರಿಯನ್ನು ಏಕಕಾಲಕ್ಕೆ ಕೈಗೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರು (ಎಡಿಎಲ್‌ಆರ್‌) ಸರ್ವೆ ಕಾರ್ಯಕ್ಕೆ ಕ್ರಮ ವಹಿಸಿದರೆ ತಹಸೀಲ್ದಾರ್‌ಗಳು ಒತ್ತುವರಿ ತೆರವುಗೊಳಿಸುವ ಜತೆಗೆ ‘ಜಿಯೋ ಫೆನ್ಸಿಂಗ್‌’ನಡಿ ದಾಖಲಿಸುವ ಕಾರ್ಯ ಕೈಗೊಳ್ಳಲಿದ್ದಾರೆ.

ಸ್ಪಂದಿಸದಿದ್ದರೆ ನೋಟಿಸ್‌

ತಹಸೀಲ್ದಾರ್‌ಗಳು ಒತ್ತುವರಿ ತೆರವು ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಕಂದಾಯ ಸಚಿವರು ಖಡಕ್‌ ಸೂಚನೆ ನೀಡಿದ್ದಾರೆ. ಇಷ್ಟಾದರೂ ತೆರವು ಕಾರ್ಯಾಚರಣೆ ನಡೆಸದೆ ನಿರ್ಲಕ್ಷ್ಯ ತೋರಿದರೆ ನೋಟಿಸ್‌ ನೀಡಿ ಬಿಸಿ ಮುಟ್ಟಿಸಲು ಚಿಂತನೆ ನಡೆದಿದೆ.

ಡ್ಯಾಶ್‌ಬೋರ್ಡ್‌ನಲ್ಲಿ ಮಾಹಿತಿ ಅಪ್‌ಡೇಟ್‌

ಕಂದಾಯ ಭೂಮಿ ಒತ್ತುವರಿ ತೆರವು ಕಾರ್ಯ ಪ್ರಗತಿಯ ನಿರಂತರ ಮೇಲ್ವಿಚಾರಣೆಗೆ ಕೇಂದ್ರ ಕಚೇರಿಯಲ್ಲಿವಿಶೇಷ ಡ್ಯಾಶ್‌ಬೋರ್ಡ್‌ ವ್ಯವಸ್ಥೆ ಮಾಡಲಾಗಿದೆ. ಡಿಸಿ, ಎಸಿ, ತಹಸೀಲ್ದಾರ್‌ ಸೇರಿದಂತೆ ಇತರೆ ಶ್ರೇಣಿ ಅಧಿಕಾರಿಗಳ ಪ್ರಗತಿಯನ್ನು ನಿರಂತರವಾಗಿ ಡ್ಯಾಶ್‌ಬೋರ್ಡ್‌ನಿಂದ ತಿಳಿದುಕೊಳ್ಳಬಹುದಾಗಿದೆ.

“ರೈತರು ಸಾಗುವಳಿ ಮಾಡುತ್ತಿರುವ ಭೂಮಿ ಹೊರತುಪಡಿಸಿ ಉಳಿದ ಒತ್ತುವರಿ ತೆರವುಗೊಳಿಸಬೇಕು. ಕೆರೆ-ಕುಂಟೆ, ಸ್ಮಶಾನ, ಗುಂಡು ತೋಪು, ರಸ್ತೆ ಒತ್ತುವರಿಯನ್ನು ಆದ್ಯತೆ ಮೇರೆಗೆ ತೆರವುಗೊಳಿಸಲು ಸೂಚನೆ ನೀಡಲಾಗಿದೆ.”-   ಕೃಷ್ಣ ಬೈರೇಗೌಡ ಕಂದಾಯ ಸಚಿವ
 
“ರಾಜ್ಯದಲ್ಲಿರುವ ಕಂದಾಯ ಭೂಮಿಯನ್ನು ನಿಖರವಾಗಿ ಗುರುತಿಸಿ, ಸಂರಕ್ಷಣೆ ಮಾಡಿಕೊಳ್ಳುವುದಕ್ಕೆ ಕಂದಾಯ ಸಚಿವರು ಆದ್ಯತೆ ನೀಡಿದ್ದಾರೆ. ಒತ್ತುವರಿ ತೆರವು ಕಾರ್ಯದ ಪ್ರಗತಿಯನ್ನು ನಿರಂತರ ಮೇಲ್ವಿಚಾರಣೆ ಮೂಲಕ ಯಶಸ್ವಿಯಾಗಿ ನಡೆಸಲು ಸಿದ್ಧತೆ ನಡೆದಿದೆ.”-   ಸುನೀಲ್‌ ಕುಮಾರ್‌ ಪೊಮ್ಮಲ ಕಂದಾಯ ಆಯುಕ್ತರು

 

ಅಂಕಿ ಅಂಶಗಳು

ರಾಜ್ಯದಲ್ಲಿ ಗುರುತಿಸಲಾಗಿರುವ ಕಂದಾಯ ಭೂಮಿ – 26 ಲಕ್ಷ ಎಕರೆ
ರಾಜ್ಯದಲ್ಲಿ ಒತ್ತುವರಿಯಾಗಿ ಕಂದಾಯ ಭೂಮಿ – 13.17 ಲಕ್ಷ ಎಕರೆ
ಒತ್ತುವರಿ ಪ್ರಕರಣಗಳನ್ನು ಪ್ರತಿವಾರ ತಹಸೀಲ್ದಾರ್‌ಗಳು ತೆರವುಗೊಳಿಸಬೇಕೆಂದು ಟಾರ್ಗೆಟ್‌ -10 ರಿಂದ 20
ರಾಜ್ಯದಲ್ಲಿರುವ ತಹಸೀಲ್ದಾರ್‌ಗಳ ಸಂಖ್ಯೆ -239

 

KMF NEWS BHARATH MEDIA

Leave a Reply

Your email address will not be published. Required fields are marked *