ಮುಂದಿನ ದಿನಗಳಲ್ಲಿ ನನ್ನ ಸ್ವಂತ ಕ್ಷೇತ್ರ ಶ್ರೀನಿವಾಸಪುರ ಹೋಗುವುದು ನನ್ನ ನಿಯಮ… ಮುಳಬಾಗಿಲು ಕೂಡ ನನ್ನ ಸ್ವಂತ ಕ್ಷೇತ್ರದಂತೆ ನೋಡಿಕೊಳ್ಳುತ್ತಿದ್ದಾರೆ. ಎಷ್ಟು ದಿನ? ಆ ಕಡೆ ರಮೇಶ್ ಕುಮಾರ್, ಈ ಕಡೆ ವೆಂಕಟ್ ಶಿವ ರೆಡ್ಡಿ ಇವರೇ ಇರಬೇಕಾ? ಕಾನೂನು ದಿಕ್ಕು ತಪ್ಪಿಸಿ ರಾಜಕೀಯ ಶಡ್ಯಂತ್ರ ಮಾಡಿ ಶ್ರೀನಿವಾಸಪುರ ಮೀಸಲು ಕ್ಷೇತ್ರ ಅರ್ಹತೆ ಇದ್ದರೂ ಸಹ ಮುಳಬಾಗಿಲಿಗೆ ಮೀಸಲು ಕ್ಷೇತ್ರ ಮಾಡಿರುತ್ತಾರೆ.
ಮುಂದಿನ ದಿನಗಳಲ್ಲಿ ನನ್ನ ಸ್ವಂತ ಕ್ಷೇತ್ರ ಶ್ರೀನಿವಾಸಪುರ ಹೋಗುವುದು ನನ್ನ ನಿಯಮ… ಮುಳಬಾಗಿಲು ಕೂಡ ನನ್ನ ಸ್ವಂತ ಕ್ಷೇತ್ರದಂತೆ ನೋಡಿಕೊಳ್ಳುತ್ತಿದ್ದಾರೆ. ಎಷ್ಟು ದಿನ? ಆ ಕಡೆ ರಮೇಶ್ ಕುಮಾರ್, ಈ ಕಡೆ ವೆಂಕಟ್ ಶಿವ ರೆಡ್ಡಿ ಇವರೇ ಇರಬೇಕಾ? ಕಾನೂನು ದಿಕ್ಕು ತಪ್ಪಿಸಿ ರಾಜಕೀಯ ಶಡ್ಯಂತ್ರ ಮಾಡಿ ಶ್ರೀನಿವಾಸಪುರ ಮೀಸಲು ಕ್ಷೇತ್ರ ಅರ್ಹತೆ ಇದ್ದರೂ ಸಹ ಮುಳಬಾಗಿಲಿಗೆ ಮೀಸಲು ಕ್ಷೇತ್ರ ಮಾಡಿರುತ್ತಾರೆ.
ಎಲ್ಲರಿಗೂ ಆಸೆ ಇರುತ್ತೆ, ಅದೇ ರೀತಿ ನನಗೂ ಆಸೆ ಇರುತ್ತದೆ. ನನ್ನ ಸ್ವಂತ ಕ್ಷೇತ್ರ ಶ್ರೀನಿವಾಸಪುರಕ್ಕೆ ನಾನು ಹೋಗುವುದು ನನ್ನ ನಿಯಮ… ಮೋದಿಜಿ ಅವರು ಹೇಳಿರುವಂತೆ 33% ಮಹಿಳಾ ಮೀಸಲಾತಿ ಜಾರಿಗೆ ಬಂದರೆ ವೇಮಗಲ್ ಹೊಸ ತಾಲೂಕಾಗಿ ಬರುತ್ತದೆ ಹಾಗೂ ಶ್ರೀನಿವಾಸಪುರ ಮೀಸಲು ಕ್ಷೇತ್ರ ಆಗುತ್ತದೆ. ಇದು ಒಂದು ಕಾನೂನು ವ್ಯವಸ್ಥೆಯಾಗಿದೆ, ಅದರಿಂದ ಹೇಳುತ್ತಿರುವೆ ಎಂದು ಹೇಳಿದ ಮುಳಬಾಗಿಲು ಶಾಸಕ ಸಮೃದ್ಧಿ ವಿ ಮಂಜುನಾಥ್…
ಎಲ್ಲ ವಿಷಯಗಳ ನಡುವೆ ಮೀಸಲಾತಿ ವ್ಯವಸ್ಥೆಯು ಹಿಂದುಳಿದ ವರ್ಗಗಳ ಅರ್ಹತೆವುಳ್ಳ, ಆರ್ಥಿಕವಾಗಿಯೂ ಹಿಂದುಳಿದ ಸಾಮಾಜಿಕ ಕಳಕಳಿ ಇರುವ ಅನೇಕ ಯುವಕರು ಮುನ್ನಲೆಗೆ ಬಂದು, ಹಿಂದುಳಿದ ಎಲ್ಲರನ್ನು ಕೈ ಹಿಡಿದು ನಡೆಸಿ ಸಮಾಜದಲ್ಲಿ ಸಾಮರಸ್ಯ ಯುಕ್ತ ಸಮಾನತೆಯನ್ನು ತರುವ ಉದ್ದೇಶದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಜಿ ರವರು ಮೀಸಲಾತಿಯನ್ನು ಸಂವಿಧಾನದಲ್ಲಿ ಇಂತಿಷ್ಟು ವರ್ಷಗಳು ಎಂದು ಅನುಷ್ಠಾನಿಸಿದರು.
ಈಗಾಗಲೇ ಅತಿ ಹೆಚ್ಚು ರಾಷ್ಟ್ರೀಯ ಮತ್ತು ಸ್ಥಳೀಯ, ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಅಥವಾ ಹಣವಂತ ನಾಯಕರು, ಹೀಗೆ ಸದೃಢರನ್ನು ಮಾತ್ರ ರಾಜಕೀಯ ಕ್ಷೇತ್ರದಲ್ಲಿ ಬೆಳೆಸುತ್ತಿರುವುದು ಮತ್ತು ಯಾವೊಬ್ಬ ಮಧ್ಯಮಸ್ಥ ಆರ್ಥಿಕತೆ ಅಥವಾ ಹಿಂದುಳಿದ ಆರ್ಥಿಕತೆ ಹೊಂದಿರುವಂತಹ ನಾಗರೀಕರಿಗೆ ಅವಕಾಶ ಕೊಡದಿರುವುದು ಆಘಾತಕಾರಿ ಬೆಳವಣಿಗೆಯು ಅಲ್ಲದೆ ಅಸಹಜ ನೈತಿಕತೆ ಇಲ್ಲದ ರಾಜಕೀಯ ಎಂದೆನಿಸಿದೆ.
ಹೀಗಿರುವಾಗ ಕನಿಷ್ಠ ಮೀಸಲಾತಿ ಕ್ಷೇತ್ರಗಳಲ್ಲಿಯಾದರೂ ಸರ್ವ ಜನರನ್ನು ಸಾಮರಸ್ಯದಿಂದ ನೋಡುವ ಅರ್ಹ ಯುವ ಪೀಳಿಗೆಯ, ರಾಷ್ಟ್ರೀಯ ಮೌಲ್ಯಗಳುಳ್ಳ ಹಿಂದುಳಿದ ವರ್ಗಗಳ ನಾಯಕರು ಹೊರಹೊಮ್ಮ ಬೇಕು, ಎಂಬ ಹಂಬಲ ಸಮಾಜದಲ್ಲಿ ಇರುವಾಗಲೇ, ಪ್ರಸಕ್ತ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜಿ ಅವರ ಅಸ್ಮಿತೆಯ ಆಶಯಗಳ ಮೀಸಲಾತಿಯನ್ನು ಬದಿಗಿಟ್ಟು ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳಲ್ಲಿ ಈಗಾಗಲೇ ಸದೃಢಗೊಂಡಿರುವ ಹಣವಂತರು ಅಥವಾ ದೊಡ್ಡ ರಾಜಕಾರಣಗಳನ್ನು ಓಲೈಕೆ ಮಾಡುವ ಅವರ ನಂಬಿಕೆ ಅಥವಾ ಅವರ ಬೇನಾಮಿಗಳನ್ನು ಮೀಸಲಾತಿ ಕ್ಷೇತ್ರಗಳಲ್ಲೂ ಸಹ ತಮ್ಮ ಹಣಬಲದಿಂದ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವುದು ಅಲ್ಲದೆ, ಅದೇ ಮೀಸಲಾತಿಯಲ್ಲಿ ಒಮ್ಮೆ ಗೆದ್ದ ಮೇಲು ಮತ್ತೆ ಅವರನ್ನೇ ಕಣಕ್ಕಿಳಿಸಿ ಹಿಂದುಳಿದ ವರ್ಗಗಳ ಯುವತೆಯ ರಾಜಕೀಯ ಕ್ಷೇತ್ರದ ಮೇಲಿನ ಆಸೆಗಳಿಗೆ ತಣ್ಣೀರು ಎರಚುವಂತಹ ವ್ಯವಸ್ಥೆಯಾಗಿದೆ.
ಮೀಸಲಾತಿ ವ್ಯವಸ್ಥೆಯಲ್ಲಿ ಅವಕಾಶ ಪಡೆಯುವ ಯಾರೇ ಒಬ್ಬ ರಾಜಕೀಯ ನಾಯಕರಾಗಲಿ ಅಥವಾ ಗೆದ್ದಿರುವ ಶಾಸಕ ಸಂಸದರಾಗಲಿ, ಒಮ್ಮೆ ಆತ್ಮಸಾಕ್ಷಿಯಿಂದ ಯೋಚಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಜಿ ರವರ ಆಶಯಗಳನ್ನು ಎತ್ತಿ ಹಿಡಿಯುವಂತಾಗಬೇಕು. ತಾನು ನಾಯಕನಾದ ಮೇಲೆ ಕನಿಷ್ಠ 10 ಜನ ತನ್ನನ್ನು ನಂಬಿರುವ ಜನರಲ್ಲಿ ನಾಯಕರನ್ನು ಗುರುತಿಸಬೇಕು. ಒಬ್ಬ ವ್ಯಕ್ತಿ ಮೀಸಲಾತಿಯ ಸೌಲಭ್ಯ ಪಡೆದು ಸದೃಢನಾದ ನಂತರ ತನ್ನ ಹಿಂದುಳಿದ ವರ್ಗಗಳ ಬಾಂಧವರಲ್ಲಿ ಮತ್ತೊಬ್ಬರನ್ನು ಚುನಾಯಿಸುವಂಥವನಾಗಬೇಕು ಹಾಗೂ ಮತ್ತೊಬ್ಬರಿಗೆ ಅವಕಾಶ ಕಲ್ಪಿಸಿಕೊಡಬೇಕು. ಅದನ್ನು ಬಿಟ್ಟು ತಾನು ಬೆಳೆದು ತನ್ನ ಮಕ್ಕಳನ್ನು ಬೆಳೆಸಲು ಮತ್ತು ಬಲಿಷ್ಠ ಸಮಾಜವನ್ನು ಕಟ್ಟಿಕೊಂಡು ನಿಜವಾದ ಅಲ್ಪಸಂಖ್ಯಾತ ಹಿಂದುಳಿದ ಅರ್ಹ ಯುವತೆಯನ್ನು ಕಡೆಗಣಿಸಿ ಮೀಸಲಾತಿಯಲ್ಲಿ ಒಮ್ಮೆ ಶಾಸಕ ಸಂಸದರಾಗಿರುವ ಯಾರೇ ಆಗಲಿ ಮತ್ತೊಮ್ಮೆ ಮೀಸಲಾತಿಯ ಅವಕಾಶ ಪಡೆಯುವ ಬದಲು ಸಾಮಾನ್ಯ ಕ್ಷೇತ್ರಗಳಲ್ಲಿ ತಾವು ಮಾಡಿರುವ ಕಾರ್ಯಕ್ಷಮತೆ ಮತ್ತು ತಮಗಿರುವ ಸದೃಢತೆಯ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸಬೇಕು.
ಈ ಮೇಲಿನ ಎಲ್ಲ ವಿಚಾರಗಳು ಪ್ರಸಕ್ತ ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಹಾಗೂ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಗ್ರಾಮಮಟ್ಟಗಳಲ್ಲಿ ಚರ್ಚೆಗೊಳ್ಳಲ್ಪಟ್ಟಿದೆ. ಇನ್ನು ಮುಂದೆ ಮೀಸಲಾತಿ ವ್ಯವಸ್ಥೆಯನ್ನು ದುರ್ಬಳಕೆ ಮಾಡುವುದು ಅಥವಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ಬದಿಗಿಟ್ಟು ಜನರನ್ನು ದಿಕ್ಕು ತಪ್ಪಿಸುವ ನಾಟಕಗಳು ನಡೆಯುವುದಿಲ್ಲ ಎಂಬ ಮಾತು ಯುವಜನರಲ್ಲಿ ಸದೃಢವಾಗಿ ಮೊಳಗುತ್ತಿದೆ.
Leave a Reply